ರಂಜಾನ್ ಮಾಸದ ಸಡಗರ-ಸಂಭ್ರಮ

ಮಂಗಳವಾರ, ಜೂಲೈ 16, 2019
26 °C

ರಂಜಾನ್ ಮಾಸದ ಸಡಗರ-ಸಂಭ್ರಮ

Published:
Updated:

ಪವಿತ್ರ ರಂಜಾನ್ ತಿಂಗಳು ಆರಂಭವಾಗಿದೆ. ನಗರದಲ್ಲೆಗ ಉಪವಾಸದ ಜೊತೆಗೆ ತಿಂಡಿ ತಿನಿಸುಗಳ ಮಾರಾಟವೂ ಭರಾಟೆಯಲ್ಲಿದೆ. ಹಬ್ಬದ ಸಂಭ್ರಮದಲ್ಲಿ `ಚದರ್~ ಹೊದಿಸಲು ಮಹಿಳೆಯೊಬ್ಬರು ಖರೀದಿಯಲ್ಲಿ ತೊಡಗಿದ್ದರು. ಇಳಿಸಂಜೆಯಲ್ಲಿ ಬಾಯಿ ಸಿಹಿ ಮಾಡಿಕೊಳ್ಳಲು ಫೇಣಿಗಿಂತ ಮಿಗಿಲಾದ ಸಿಹಿಯುಂಟೆ?ಹಣ್ಣು ಒಣಹಣ್ಣುಗಳೊಂದಿಗೆ ಕುರಕಲು ಬೇಡವೇ? ತಳ್ಳುಗಾಡಿಯಲ್ಲೂ ಈಗ ವಿವಿಧ ಬಗೆಯ ಚಿಪ್ಸ್‌ಗಳ ಮಾರಾಟ ಜೋರು. ಪವಿತ್ರ ಮಾಸದ ವಿಶೇಷ ಪ್ರಾರ್ಥನೆಗೆ ಹೊಸ ಟೋಪಿಗಳ ಖರೀದಿಯಲ್ಲಿ ಮುಸ್ಲಿಂ ಬಾಂಧವರು ನಿರತರು. ಮಳೆಗಾಲದ ತಂಗಾಳಿಯಲ್ಲಿ ಮನಸು ಬಿಸಿಬಿಸಿ ಬಜ್ಜಿ ಬಯಸಿದರೆ... ಗಾಡಿಯತ್ತ ಕಾಲೆಳೆದುಕೊಂಡು ಹೋಗುತ್ತವೆ. ರಂಜಾನ್ ತಿಂಗಳ ವಿವಿಧ ಬಣ್ಣಗಳಿವು. ಇನ್ನು ತಿಂಗಳುದ್ದಕ್ಕೂ ಇವು ಅಲ್ಲಲ್ಲಿ ಕಾಣಸಿಗುತ್ತಲೇ ಇರುತ್ತವೆ. 

 ಚಿತ್ರಗಳು: ಎಸ್.ಕೆ.ದಿನೇಶ್,  ಗೋವಿಂದರಾಜ್ ಜವಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry