ರಂಜಿತ್‌ ಸಿನ್ಹಾ ವಿರುದ್ಧ ವಾದಕ್ಕೆ ಸುಪ್ರೀಂ ಸಮ್ಮತಿ

ಶುಕ್ರವಾರ, ಮಾರ್ಚ್ 22, 2019
21 °C
2ಜಿ ತರಂಗಾಂತರ ಹಂಚಿಕೆ ಪ್ರಕರಣ

ರಂಜಿತ್‌ ಸಿನ್ಹಾ ವಿರುದ್ಧ ವಾದಕ್ಕೆ ಸುಪ್ರೀಂ ಸಮ್ಮತಿ

Published:
Updated:

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ವಿರುದ್ಧ ವಾದ ಮಂಡನೆಗೆ ಸುಪ್ರೀಂಕೋರ್ಟ್‌ ಸೋಮವಾರ ಸಮ್ಮತಿ ಸೂಚಿಸಿದೆ.

2ಜಿ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೆಲವರು ರಂಜಿತ್‌ ಸಿನ್ಹಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿ ನೀಡಿದವರ ಗುರುತು ಬಹಿರಂಗಪಡಿಸುವಂತೆ ಈ ಹಿಂದೆ ಹೇಳಿದ್ದ ಸುಪ್ರೀಂಕೋರ್ಟ್‌, ಇದೀಗ ಅದರ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಅವರನ್ನೊಳಗೊಂಡ ನ್ಯಾಯಪೀಠವು ಸಿನ್ಹಾ ಅವರ ವಿರುದ್ಧ ವಾದ ಮಂಡನೆಗೆ ಸಮ್ಮತಿಸಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 10ಕ್ಕೆ ಮುಂದೂಡಿದೆ.

2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಹೆಸರಿಸ­ಲಾದ ಕಂಪೆನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಕಳೆದ 15 ತಿಂಗಳಲ್ಲಿ ಸಿಬಿಐ ನಿರ್ದೇಶಕರನ್ನು ಭೇಟಿ ಮಾಡಿದ್ದಾರೆ ಎಂದು ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಶನ್‌ (ಸಿಪಿಐಎಲ್) ಸಂಸ್ಥೆ ಆರೋಪಿಸಿದೆ.

ಸಿಬಿಐ ನಿರ್ದೇಶಕರ ಅಧಿಕೃತ ನಿವಾಸದ ಸಂದರ್ಶಕರ ಪುಸ್ತಕದಲ್ಲಿ ಈ ಸ್ಫೋಟಕ ಮಾಹಿತಿಗಳಿವೆ ಎಂದು ಸಿಪಿಐಎಲ್‌ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry