ಭಾನುವಾರ, ಫೆಬ್ರವರಿ 28, 2021
29 °C

ರಂಜಿಸಿದ ಅಖಿಲ ಭಾರತ ಮುಷಾಯಿರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಜಿಸಿದ ಅಖಿಲ ಭಾರತ ಮುಷಾಯಿರಾ

ಬೀದರ್‌: ಬೀದರ್‌ ಉತ್ಸವ ನಿಮಿತ್ತ ಅಂಗವಾಗಿ ಉತ್ಸವದ ಎರಡನೇ ದಿನ ನಗರದ ಮಹ್ಮದ ಗವಾನ್ ಮದರಸಾದಲ್ಲಿ ಆಯೋಜಿಸಿದ್ದ ಅಖಿಲ ಭಾರತೀಯ ಮುಷಾಯಿರಾ ಕಾರ್ಯ­ಕ್ರಮ ಸಭಿಕರಲ್ಲಿ ಚಳಿಯಲ್ಲಿಯೂ ಬೆಚ್ಚನೆಯ ಅನುಭವ ಮೂಡಿಸಿತು.ಭಾನುವಾರ  ರಾತ್ರಿ ಆರಂಭವಾದ ಮುಷಾಯಿರಾ ತಡ ರಾತ್ರಿಯವರೆಗೆ ನಡೆದದ್ದು ವಿಶೇಷವಾಗಿತ್ತು. ಸಂಸದ  ಎನ್. ಧರ್ಮಸಿಂಗ್ ಮುಷಾಯಿರಾಗೆ ಚಾಲನೆ ನೀಡಿದರು.ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ,­ಮಹ್ಮದ್ ಯುಸುಫ್ ರಹೀಂ ಬಿದ್ರಿ ಅವರ ಉರ್ದು ಪುಸ್ತಕ (ನೂರ್‌) ಅನ್ನು ಬಿಡುಗಡೆಗೊಳಿಸಿದರು.

ನವದೆಹಲಿ, ಕೋಲ್ಕತ್ತ, ಇಂದೋರ್, ಬೆಂಗಳೂರು, ಕಾನ್ಪುರ, ಲಖನೌ ಮತ್ತು ಬೀದರ್‌ನ ಹಾಡುಗಾರರಾದ ರಾಹತ ಇಂದೋರಿ, ವಸೀಮ್ ಬರೇಲ್ವಿ, ನಿದಾ ಫಾಜಲಿ, ಡಾ. ಮುಜಾಫರ ಹನ್ಫಿ, ಗುಲ್ಜಾರ್ ದೆಹಲ್ವಿ, ಶಬೀನಾ ಅದೀಬ್, ಇಕ್ಬಾಲ್ ಅಷಾಹರ್, ಫರಹತ್ ಎಹಸಾಸ್, ಪಾಪುಲರ್ ಮೇರಠಿ, ಜಾವೇದ್ ಮುಶೀರಿ, ಹೀನಾ ತಹಮಾರಿ, ಸೋಹೆಲ್ ಲಖನ್ವಿ, ಸರದಾರ ಅಯಾಘ, ಹಬೀಬ್ ಹಾಷ್ಮಿ, ಅಬ್ದುಲ್ ವಹೀದ್ ಬಹಾರ್, ಸೈಯದ್ ಲತೀಫ್ ಖಲೀಷ, ಅಬ್ದುಲ್ ಮುಖ್ತದರ ತಾಜ್ ಅವರುಗಳು ತಮ್ಮ ಶಹರಿಗಳನ್ನು ಹಾಡಿ ರಂಜಿಸಿದರು.ಶಾಸಕರಾದ ಈಶ್ವರ ಖಂಡ್ರೆ, ಉಮೇಶ ಜಾಧವ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಶಾಸಕರಾದ ರಹೀಂ ಖಾನ್, ಮಾರುತಿ ಮುಳೆ ಮತ್ತಿತರರು  ಮುಷಾಯಿರಾವನ್ನು ಆಲಿಸಿದರು.ಮಹಮ್ಮದ್ ಯುಸೂಫ್ ರಹೀಂ ಬಿದ್ರಿ ನಿರೂಪಿಸಿದರು. ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಉಜ್ವಲ್ ಕುಮಾರ ಘೋಷ್, ಸಹಾಯಕ ಆಯುಕ್ತೆ ಹಪ್ಸಿಬಾ ರಾಣಿ ಕೋರ್ಲಪಾಟಿ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಸುನಿಲ್ ಪನ್ವಾರ್ಮ, ಸಾವಿರಾರು ಪ್ರೇಕ್ಷಕರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.