ಬುಧವಾರ, ನವೆಂಬರ್ 13, 2019
17 °C

ರಕ್ತದಾನ: ತಪ್ಪುಕಲ್ಪನೆ ಸಲ್ಲದು- ವೈದ್ಯರ ಸಲಹೆ

Published:
Updated:

ಸೊರಬ: ಇಲ್ಲಿನ ತಾಲ್ಲೂಕು ಯುವಜನ ಸಂಘದಿಂದ 25ನೇ ರಕ್ತದಾನ ಶಿಬಿರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಟ್ರಸ್ಟ್ ಹಾಗೂ ರೆಡ್‌ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಸಹಕಾರದೊಂದಿಗೆ ಕೋಟಿಪುರದ ಎವೆರಾನ್ ಶಾಲೆ ಆವರಣದಲ್ಲಿ ಭಾನುವಾರ ನಡೆಯಿತು. 40ಜನ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.ರೆಡ್‌ಕಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ಪ್ರತಿವ್ಯಕ್ತಿಯಲ್ಲಿ ದಿನಕ್ಕೆ 100 ಮಿ.ಲೀ. ರಕ್ತ ಉತ್ಪಾದನೆ ಆಗಿವಿದಲ್ಲದೇ ಸ್ವಲ್ಪ ಪ್ರಮಾಣದಲ್ಲಿ ನಾಶವೂ ಆಗುತ್ತದೆ. ಈ ಹಿನ್ನಲೆಯಲ್ಲಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬ ವ್ಯಕ್ತಿಯ ಪ್ರಾಣದಾನ ಮಾಡುವ ಮೂಲಕ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ರಕ್ತದಾನ ಮಾಡಿದರೆ ನಿಶಕ್ತಿ ಉಂಟಾಗುತ್ತದೆ, ದೇಹ ದಪ್ಪನಾಗುತ್ತದೆ ಎಂಬುದು  ಊಹೆಯಷ್ಟೇ ಎಂದರು.ಶಿಕ್ಷಕಿ ರೇಖಾ ರಕ್ತದಾನ ಮಾಡಿದರು.ಯುವಜನ ಸಂಘದ ಸಂಸ್ಥಾಪಕ ಎಂ.ಎಸ್. ಕಾರ್ತಿಕ್, ಅಧ್ಯಕ್ಷ ಸಂಪತ್‌ಕುಮಾರ್, ಸದಸ್ಯರಾದ ಚನ್ನವೀರಪ್ಪಗೌಡ್ರು, ಬಸವನಗೌಡ್ರು, ಚರಿತಾ ಕಾರ್ತಿಕ್, ಬಣ್ಣದ ಬಾಬು, ಸಂಧ್ಯಾ, ಬ್ಲಡ್ ಬ್ಯಾಂಕ್ ಪಿಆರ್‌ಒ ಧರಣೇಂದ್ರ, ದಿನಕರ್, ಹಿರಿಯ ಲ್ಯಾಬ್ ತಂತ್ರಜ್ಞ ಅಲ್ಲಾಭಕ್ಷ್, ಸಿಬ್ಬಂದಿ ಸೀಮಾ, ಸುನಿತಾ, ಸತೀಶ್, ಧರ್ಮಸ್ಥಳ ಸಂಘದ ಮೇಲ್ವಿಚಾರಕರಾದ ಪ್ರಕಾಶ ಕುಮಾರ್, ಜೆ.ಕೆ. ಸತೀಶ್, ಗೌರಿಶಂಕರ್, ಮೃತ್ಯಂಜಯ, ಸುರೇಶ್, ಅನಿಲ್‌ಕುಮಾರ್, ಶರತ್‌ಕುಮಾರ್, ಬಸವನಗೌಡ ಪಾಟೀಲ್, ರಾಜು, ಶಿವರಾಜ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)