ರಕ್ತದಾನ ಮಾಡಿ ಜೀವ ಉಳಿಸಲು ಸಚಿವರ ಸಲಹೆ

7

ರಕ್ತದಾನ ಮಾಡಿ ಜೀವ ಉಳಿಸಲು ಸಚಿವರ ಸಲಹೆ

Published:
Updated:

ಮೂಡಲಗಿ: `ಎಲ್ಲ ದಾನಗಳಲ್ಲಿ ರಕ್ತದಾನವು ಶ್ರೇಷ್ಠ ದಾನವಾಗಿದ್ದು, ರಕ್ತದಾನ ಮಾಡಿದರೆ ಒಂದು  ಜೀವ ಉಳಿಸಿದ ಸಾರ್ಥಕ ಭಾವನೆ ದೊರೆಯು ತ್ತದೆ' ಎಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ಇಲ್ಲಿಯ ಕೆ.ಎಚ್. ಸೋನವಾಲಕರ ಪ್ರತಿಷ್ಠಾನ ದವರು ಕೃಷ್ಣಪ್ಪ ಸೋನವಾಲಕರ ಅವರ ಜನ್ಮ ದಿನಾಚರಣೆಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಬೃಹತ್ ಐಚ್ಛಿಕ ರಕ್ತದಾನ ಶಿಬಿರ ಮತ್ತು ಶಾಲೆಯ ನೂತನ 3 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾದಾನ, ಅನ್ನದಾನ ಹಾಗೂ ರಕ್ತದಾನ ಮಾಡಿದವರನ್ನು ಸಮಾಜವು ಸದಾ ಸ್ಮರಿಸುತ್ತದೆ ಎಂದರು.ಕೆ.ಎಚ್. ಸೋನವಾಲಕರ ಸರ್ಕಾರಿ ಶಾಲೆಯು ರಾಜ್ಯಕ್ಕೆ  ಮಾದರಿ ಎನ್ನುವ ರೀತಿಯಲ್ಲಿ ಬೆಳೆದಿರು ವುದು ಹೆಮ್ಮೆ ಪಡುವಂಥದ್ದು.  ಶಾಲೆಗೆ ಭೂದಾನ ಮಾಡಿರುವ ಸೋನವಾಲಕರ ಕುಟುಂಬದವರು, ಸಮುದಾಯ ಜನರ ಸಹಭಾಗಿತ್ವ ಹಾಗೂ ಸಿಬ್ಬಂದಿಯ ಸೇವೆಯು ಶ್ಲಾಘನೀಯವಾಗಿದೆ ಎಂದರು.ಶಾಸಕರ ಅನುದಾನದಲ್ಲಿ ಕೆಎಚ್‌ಎಸ್ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ರೂ5 ಲಕ್ಷ ರೂ. ಹಣವನ್ನು ನೀಡುವುದಾಗಿ ತಿಳಿಸಿದ ಅವರು, ಅದು ಸದ್ಬಳಕೆಯಾಗಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುತ್ತದೆ ಎನ್ನುವ ವಿಶ್ವಾಸ ನನ್ನಲ್ಲಿದೆ ಎಂದರು.ಮೂಡಲಗಿ ಪುರಸಭೆಯ ಅಧ್ಯಕ್ಷರ, ಉಪಾಧ್ಯಕ್ಷ ಆಯ್ಕೆಯನ್ನು ಸೆ. 11ರಂದು ಮಾಡ ಲಾಗುವುದು.  ನಗರದ ಅಭಿವೃದ್ಧಿಯ ದೃಷ್ಟಿ ಯಿಂದ ಪುರಸಭೆಯ ಎಲ್ಲ 23 ಸದಸ್ಯರೊಂದಿಗೆ ಚರ್ಚಿಸಿ ಯೋಗ್ಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಾಗಿ ತಿಳಿಸಿದರು.ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುತ್ತಿಲ್ಲ ಎನ್ನುವ ಸಮಸ್ಯೆ ಬಹಳ ದಿನಗಳಿಂದ ಇದೆ. ಈ ವಿಷಯವಾಗಿ ತಾವು ತಾಲ್ಲೂಕು ವೈದ್ಯಾಧಿಕಾರಿ ಡಾ. ಬೆಣಚಿನಮರಡಿ ಅವರ ಬಳಿಯಲ್ಲಿ ಮಾತನಾಡಿದರೂ ಪ್ರಯೋಜನ ಆಗಿಲ್ಲ. ಭೀಮವ್ವ ಜಾರಕಿಹೊಳಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‌ಗೆ ಆಸ್ಪತ್ರೆಯನ್ನು ದತ್ತು ನೀಡಿದರೆ ವೈದ್ಯರನ್ನು ನೇಮಿಸಿ ಉತ್ತಮ ಸೇವೆ ನೀಡುವುದಕ್ಕೂ ತಾವು ಸಿದ್ಧ ಎನ್ನುವುದನ್ನು ಸಹ ಪ್ರಸ್ತಾಪ ಇಟ್ಟಿರುವುದಾಗಿ ತಿಳಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೂ ಸಹ ತಾವು ಶಾಸಕರಾಗಿದ್ದುಕೊಂಡು ಕ್ಷೇತ್ರದಲ್ಲಿ ಹೆಚ್ಚು ಇದ್ದುಕೊಂಡು ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿರುವೆನು. ನನ್ನನ್ನು ಗೆಲ್ಲಿಸಿದ ಜನರ ಪ್ರೀತಿ, ವಿಶ್ವಾಸವು ನನಗೆ ಮುಖ್ಯ ಎಂದರು.

ಮುಖ್ಯೋಪಾಧ್ಯಾಯ ಜಿ.ಎಸ್. ಶೆಟ್ಯಾನವರ ಅಧ್ಯಕ್ಷತೆ ವಹಿಸಿದ್ದರು. 

 

ಸಾನಿಧ್ಯ ವಹಿಸಿದ್ದ ಶ್ರೀಪಾದಬೋಧ ಸ್ವಾಮೀಜಿ, ಧಾರವಾಡದ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿದರು.

ಡಾ. ರಾಜೇಂದ್ರ ಸಣ್ಣಕ್ಕಿ, ಅಶೋಕ ನಾಯ್ಕ, ಎಲ್.ಎಂ. ಗೋಕಾಕ, ಎಚ್.ಎ. ಸೋನವಾಲಕರ, ಜಿ.ಪಂ. ಸದಸ್ಯ ಭೀಮಶಿ ಮಗದುಮ್, ಡಾ. ಆರ್.ಎಸ್. ಬೆಣಚಿನಮರಡಿ, ಕೆ.ಎಚ್. ಸೋನವಾಲಕರ ಪ್ರತಿಷ್ಠಾನ ಅಧ್ಯಕ್ಷ ರಮೇಶ ಪ್ಯಾಟಿಗೌಡರ, ಟಿ.ಎಸ್. ಪಾರ್ಶಿ, ಎಸ್.ಜಿ. ಗೋಡಿಗೌಡರ, ಎಸ್.ಆರ್. ಸೋನವಾಲಕರ, ಡಿ.ಬಿ. ಪಾಟೀಲ, ಎಂ.ಎಚ್. ಸೋನವಾಲಕರ, ಬಿ.ಬಿ. ಹಂದಿಗುಂದ, ಅಜೀಜ್ ಡಾಂಗೆ ಉಪಸ್ಥಿತರಿದ್ದರು.ಜಿ.ಕೆ. ಮುರಗೋಡ, ಡಾ. ಎಸ್.ಎಸ್. ಪಾಟೀಲ, ಆರ್.ಡಿ. ಸಣ್ಣಕ್ಕಿ, ಮಲಿಕ ಹುಣಶ್ಯಾಳ, ಹುಸೇನ ಶೇಖ, ಡಾ. ಭಾರತಿ ಕೋಣಿ, ಪ್ರಾಚಾರ್ಯ ಪ್ರೊ. ಬಿ.ಸಿ. ಪಾಟೀಲ, ಪ್ರೊ. ರವಿ ಕೊಕಟನೂರ, ಪ್ರೊ. ಎಸ್.ಎಂ. ಕಮದಾಳ, ಡಾ. ಗಿರೀಶ ಸೋನವಾಲಕರ, ಸಂತೋಷ ಸೋನವಾಲಕರ ಮತ್ತಿತರು ಉಪಸ್ಥಿತರಿದ್ದರು.ಬಿಇಒ ಅಜಿತ ಮನ್ನಿಕೇರಿ ಸ್ವಾಗತಿಸಿದರು. ಚಿತ್ರದುರ್ಗ ಬಸವರಾಜ, ರಮೇಶ ಅಳಗುಂಡಿ ನಿರೂಪಿಸಿದರು. ನೇಮಗೌಡರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry