ರಕ್ತದಾನ ಶಿಬಿರ

7

ರಕ್ತದಾನ ಶಿಬಿರ

Published:
Updated:

ಬೆಂಗಳೂರು: ಎಚ್‌ಡಿಎಫ್‌ಸಿ ಬ್ಯಾಂಕ್ ನಗರದ ರಿಚ್‌ಮಂಡ್ ಸರ್ಕಲ್‌ನಲ್ಲಿರುವ ಬ್ಯಾಂಕ್‌ನ ಕಚೇರಿ ಸೇರಿದಂತೆ ದೇಶದ 572 ನಗರಗಳ 974 ಕೇಂದ್ರಗಳಲ್ಲಿ  ಡಿ.7ರ ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಭಾರತದಲ್ಲಿಯೇ ದೊಡ್ಡ ರಕ್ತದಾನ ಶಿಬಿರ ಇದಾಗಿದೆ.ಇಂದಿರಾನಗರ, ಬೊಮ್ಮನಹಳ್ಳಿ, ವಿಮಾನ ನಿಲ್ದಾಣ ರಸ್ತೆ, ಫ್ರೇಜರ್‌ಟೌನ್‌ಗಳಲ್ಲಿರುವ ನಗರದ ಇತರ ಶಾಖೆಗಳಲ್ಲಿಯೂ ಈ ಶಿಬಿರ ನಡೆಯಲಿದೆ.  `ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜುಗಳ ಪ್ರಕಾರ ಭಾರತಕ್ಕೆ ಪ್ರತಿ ವರ್ಷ 12 ದಶಲಕ್ಷ ಘಟಕಗಳ ಅಗತ್ಯವಿದೆ.  ರಸ್ತೆ ಅಪಘಾತ ಮತ್ತು ಆಘಾತದ ಬಲಿಪಶುಗಳು, ಸಂಕೀರ್ಣ ಗರ್ಭಧಾರಣೆ ಇರುವ ಮಹಿಳೆಯರು, ಥಾಲಸೇಮಿಯಾದಿಂದ ನರಳುತ್ತಿರುವ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry