ಭಾನುವಾರ, ಏಪ್ರಿಲ್ 18, 2021
33 °C

ರಕ್ತದೊತ್ತಡಕ್ಕೆ ಉಪ್ಪು ಕಾರಣ: ಸಂಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಐಎಎನ್‌ಎಸ್): ಹೆಚ್ಚು ಉಪು ಸೇವನೆಯಿಂದ ಅಧಿಕ ರಕ್ತದೊತ್ತಡ ಹೇಗೆ ಉಂಟಾಗುತ್ತದೆ ಎಂಬ ಕಾರಣವನ್ನು ವಿಜ್ಞಾನಿಗಳು ಇದೀಗ ಪತ್ತೆಹಚ್ಚಿದ್ದಾರೆ.

ಉಪ್ಪಿನ ಅತಿಯಾದ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿ ಸುವುದು ಮತ್ತು ದೇಹದ ಉಷ್ಣತೆಯನ್ನು ಹತೋಟಿಗೆ ತರುವ ಎರಡೂ ಕ್ರಿಯೆಯನ್ನು ಒಟ್ಟಿಗೇ ನಿಯಂತ್ರಿಸುವಲ್ಲಿ ಶರೀರ ಸೆಣಸಾಡ ಬೇಕಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.

 

ಕಳೆದ ಒಂದು ದಶಕದಿಂದ ವಿಜ್ಞಾನಿಗಳು ಈ ಕಾರಣವನ್ನು ಕಂಡು ಹುಡುಕಲು ಪ್ರಯತ್ನಿಸುತ್ತಿದ್ದರೂ ಕೂಡ  ಯಶಸ್ವಿಯಾಗಿರಲಿಲ್ಲ. ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದ ರಾಬರ್ಟ್ ಪಿ. ಬ್ಲಾಂಕ್‌ಪೀಲ್ಡ್ ಮತ್ತು ಕೆಂಟ್ ಸ್ಟೇಟ್ ವಿಶ್ವವಿದ್ಯಾಲಯದ ಎಲನ್ ಎಲ್. ಗ್ಲಿಕ್‌ಮನ್ ಅವರ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿತ್ತು.

 

ಉಪ್ಪು ಮತ್ತು ನೀರಿನ ಸೇವನೆಯಿಂದ ದೇಹದ ಉಷ್ಣತೆ ತಗ್ಗುವುದು ಸಾಮಾನ್ಯವಾದರೂ ಕೂಡ ನೀರಿಗಿಂತಲೂ ಉಪ್ಪು ಸೇವಿಸಿದಾಗ ದೇಹದ ಉಷ್ಣತೆ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಯೂ ತಿಳಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.