ಶುಕ್ರವಾರ, ನವೆಂಬರ್ 22, 2019
20 °C

ರಕ್ತದೊತ್ತಡಕ್ಕೆ ಬೀಟ್‌ರೂಟ್ ಮದ್ದು

Published:
Updated:

ವಾಷಿಂಗ್ಟ್‌ನ್ (ಪಿಟಿಐ): ದಿನವೂ ಒಂದು ಕಪ್ ಬೀಟ್‌ರೂಟ್ ರಸ ಕುಡಿಯುವುದರಿಂದ ಅದು ದೇಹದಲ್ಲಿರುವ ರಕ್ತದೊತ್ತಡ ಕಡಿಮೆ ಮಾಡುತ್ತದೆ ಎಂದು ಭಾರತೀಯ ಮೂಲದ ಸಂಶೋಧಕಿಯ ನೇತೃತ್ವದ ಅಧ್ಯಯನ  ತಂಡ  ತಿಳಿಸಿದೆ.ಅಧಿಕ ರಕ್ತದೊತ್ತಡ ಇರುವವರು 227 ಗ್ರಾಂ ಬೀಟ್‌ರೂಟ್ ಜ್ಯೂಸ್‌ನ್ನು ದಿನವೂ ಕುಡಿದಾಗ 10 ಮಿ.ಮೀ. ಎಚ್‌ಜಿ.ಯಷ್ಟು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಮೆರಿಕದ ಹೃದ್ರೋಗ ಸಂಸ್ಥೆಯ ನಿಯತಕಾಲಿಕೆ ಪ್ರಕಟಿಸಿದ ರಕ್ತದೊತ್ತಡದ ಕುರಿತಾದ ಸಂಶೋಧನೆ ತಿಳಿಸಿದೆ.ಭಾರತೀಯ ಮೂಲದ ಲಂಡನ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಅಮೃತಾ ಅಹ್ಲುವಾಲಿಯಾ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ.

ಪ್ರತಿಕ್ರಿಯಿಸಿ (+)