ರಕ್ತನಿಧಿ ಕೇಂದ್ರ ಸ್ಥಾಪನೆಗೆ ಯತ್ನ: ಜೀವರಾಜ್

7

ರಕ್ತನಿಧಿ ಕೇಂದ್ರ ಸ್ಥಾಪನೆಗೆ ಯತ್ನ: ಜೀವರಾಜ್

Published:
Updated:

ಮೆಣಸೂರು (ನರಸಿಂಹರಾಜಪುರ): ನರಸಿಂಹರಾಜಪುರ ಮತ್ತು ಕೊಪ್ಪ ಸರ್ಕಾರಿ ಆಸ್ಪತ್ರೆಗಳನ್ನು 100 ಹಾಸಿಗೆಗೆ ಏರಿಸುವ ಬಗ್ಗೆ   ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಯಾಗಿದ್ದು ಈ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಡಿ.ಎನ್.ಜೀವರಾಜ್ ಭರವಸೆ ನೀಡಿದರು.

ತಾಲ್ಲೂಕಿನ ಮೆಣಸೂರು ಗ್ರಾಮದಲ್ಲಿ ಭಾನುವಾರ ಆದರ್ಶ ಯುವಕ ಸಂಘದ ನೂತನ ಕಟ್ಟಡ ಉದ್ಘಾಟಿಸಿ  ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.  ಮೆಣಸೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ರಸ್ತೆಗೆ ಶೀಘ್ರದಲ್ಲಿ ಡಾಂಬರೀಕರಣ ಮಾಡಲಾಗುವುದು. ವಿದ್ಯುತ್ ಚಿತಾಗಾರ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಜೈಲ್‌ಕಟ್ಟಡ ವ್ಯಾಪ್ತಿಯ ಬಡವಾಣೆಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಪಟ್ಟಣದ ಅಂಬೇ ಡ್ಕರ್ ನಗರದಲ್ಲಿ ರೂ.20ಲಕ್ಷ ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಿಸಲಾಗುವುದು ಎಂದರು.ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಜೆ.ಅಂಟೋನಿ ಮಾತನಾಡಿ ಯುವಕ ಸಂಘಗಳು ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಳ್ಳ ಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಅನಿಲ್, ಸಂಘವು ಬಡ ರೋಗಿಗಳಿಗೆ ನೆರವು ನೀಡಲು ನಿಧಿ ಹೊಂದಿದೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಪ್ರತಿವರ್ಷ ಕ್ರೀಡಾ ಕೂಟ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಅಧ್ಯಕ್ಷತೆಯನ್ನು ಮೆಣಸೂರು ಆದರ್ಶಯುವಕ ಸಂಘದ ಅಧ್ಯಕ್ಷ ಪಿ.ಜೆ,ವಿಜು ವಹಿಸಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಜಿ.ನಾಗರಾಜ್, ರಾಜ್ಯ ಕ್ರಿಶ್ಚಿಯನ್ ಪ್ರಾಧಿಕಾರದ ಸದಸ್ಯ ಎಂ.ಪಿ.ಸನ್ನಿ ಮೆಣಸೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಅಮ್ಮಣ್ಣಿ, ಸದಸ್ಯ ರತ್ನಾಕರ ಆಚಾರ್, ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ. ಅಂಶು ಮಂತ್,ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇ.ಸಿ.ಜೋಯಿ, ತಹಸೀಲ್ದಾರ್ ಎಚ್.ಜಯ, ಕಾಂಗ್ರೆಸ್ ಮುಖಂಡ ಸಚ್ಚಿನ್ ಮೀಗಾ, ಸ್ಫೂರ್ತಿ ಸೇವಾ ಸಂಘದ ಅಧ್ಯಕ್ಷ ಕೆ.ಎ.ಸಿಜ್ಜು, ಸೆಂಟ್ ಸೆಬಾಸ್ಟಿನ್ ಚಾಪೆಲ್‌ನ ಅಧ್ಯಕ್ಷ ವಿ.ಎಂ. ಜೋಸ್,  ವಿದ್ಯಾಗಣಪತಿ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್, ಸೌತಿಕೆರೆ ಜೀವ ಸ್ಪಂದನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಿಮೋನ್, ಕೆ.ಟಿ.ಎಲ್ದೊ, ವರ್ಗೀಸ್, ಪಿ.ಜೆ.ವಿಲ್ಸನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry