ಬುಧವಾರ, ನವೆಂಬರ್ 20, 2019
25 °C

ರಕ್ತಸ್ರಾವ ನಿಲ್ಲಿಸಲು ಬಾಟಲಿ ತುರುಕಿದರು!

Published:
Updated:

ನವದೆಹಲಿ (ಐಎಎನ್‌ಎಸ್): ಐದು ವರ್ಷದ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರ ನಡೆಸಿದ್ದರಿಂದ ಬಾಲಕಿಯ ಗುಪ್ತಾಂಗದಿಂದ ಒಂದೇ ಸಮನೆ ರಕ್ತಸ್ರಾವವಾಗುವುದನ್ನು ಕಂಡು ಕಂಗಾಲಾದ ಅತ್ಯಾಚಾರಿಗಳು ಗುಪ್ತಾಂಗದಲ್ಲಿ ಸಣ್ಣ ಬಾಟಲಿ ಮತ್ತು ಮೇಣದಬತ್ತಿಯ ತುಣುಕನ್ನು ತುರುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಪಾದಿತರಲ್ಲಿ ಒಬ್ಬನಾದ ಮನೋಜ್ ಕುಮಾರ್ (22) ಅತ್ಯಾಚಾರದ ನಂತರ ಬಾಲಕಿಯ ಗಂಟಲನ್ನು ಬ್ಲೇಡಿನಿಂದ ಕತ್ತರಿಸಲು ಯತ್ನಿಸಿದ್ದ.ಮನೋಜ್ ಅತ್ಯಾಚಾರ ನಡೆಸಿದ ನಂತರ ರಕ್ತಸ್ರಾವವಾಗುತ್ತಿದ್ದರೂ ತಾನೂ ಅತ್ಯಾಚಾರ ನಡೆಸಿದ್ದಾಗಿ ಬಿಹಾರ್‌ನಲ್ಲಿ ಸಿಕ್ಕಿಬಿದ್ದ ಪ್ರದೀಪ್‌ರಾಂ (19) ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿ ನೋವಿನಿಂದ ಅಳಲಾರಂಭಿಸಿದಾಗ ಅವಳನ್ನು ಹತ್ಯೆ ಮಾಡಲು ಅತ್ಯಾಚಾರಿಗಳು ನಿರ್ಧರಿಸಿದರು. ಪ್ರದೀಪ್‌ರಾಂ ಅವಳ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ. ಆದರೆ ಅತಿಯಾಗಿ ಕುಡಿದಿದ್ದರಿಂದ ಅವನಿಂದ ಸಾಧ್ಯವಾಗಲಿಲ್ಲ. ನಂತರ ಮನೋಜ್ ಬ್ಲೇಡಿನಿಂದ ಅವಳ ಗಂಟಲನ್ನು ಕೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಗಾಜಿಯಾಬಾದ್‌ನಲ್ಲಿ ಇರುವ ತನ್ನ ಬಾಡಿಗೆ ಮನೆಗೆ ಮನೋಜ್ ಏಪ್ರಿಲ್ 15ರಂದು ಮಧ್ಯಾಹ್ನ ಮೂರು ಗಂಟೆಗೆ ಬಂದ. ನಂತರ  ಮದ್ಯ ಸೇವಿಸಿ ಚಿಕನ್ ತಿಂದಿದ್ದಾಗಿ ಪ್ರದೀಪ್‌ರಾಂ ವಿಚಾರಣೆ ವೇಳೆ ತಿಳಿಸಿದ್ದಾನೆ.ಇದಾದ ನಂತರ ಮನೋಜ್ ಮನೆಗೆ ಬಂದ ಇಬ್ಬರೂ ಮತ್ತೆ ಮದ್ಯ ಸೇವಿಸಿದ್ದಾರೆ. ಅಮಲೇರಿದ ನಂತರ ಮೊಬೈಲ್‌ನಲ್ಲಿ ನಗ್ನ ಚಿತ್ರಗಳನ್ನು ನೋಡಿ ವೇಶ್ಯೆಯನ್ನು ಕರೆತರಲು ನಿರ್ಧರಿಸಿದ್ದಾರೆ. ಮನೋಜ್ ಅದಕ್ಕಾಗಿ ಹೊರಗೆ ಬಂದಾಗ ಹೊರಗೆ ಆಡುತ್ತಿದ್ದ ಬಾಲಕಿಯನ್ನು ನೋಡಿ ಪುಸಲಾಯಿಸಿ ಕರೆದುಕೊಂಡು ಬಂದಿದ್ದಾನೆ. ಅತ್ಯಾಚಾರವೆಸಗಿದ ನಂತರ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಆರೋಗ್ಯದಲ್ಲಿ ಚೇತರಿಕೆ: ಅತ್ಯಾಚಾರಕ್ಕೆ ಒಳಗಾಗಿರುವ ದೆಹಲಿಯ ಐದು ವರ್ಷದ ಬಾಲಕಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ಮಂಗಳವಾರ ತಿಳಿಸಿದ್ದಾರೆ. ನಿರೀಕ್ಷಿಸಿದಂತೆ ಬಾಲಕಿಯ ಆರೋಗ್ಯ ಸುಧಾರಿಸಿದ್ದು, ಜ್ವರ ಕೂಡ ಕಡಿಮೆಯಾಗಿದೆ ಎಂದು ಏಮ್ಸನ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ಯ ವೈದ್ಯಕೀಯ ಅಧೀಕ್ಷಕ ಡಿ.ಕೆ ಶರ್ಮಾ ತಿಳಿಸಿದ್ದಾರೆ.ದ್ರವ ರೂಪದ ಆಹಾರವನ್ನು ಸೇವಿಸುತ್ತಿರುವ ಬಾಲಕಿ, ಬೆಳಿಗಿನ ಉಪಹಾರವನ್ನೂ ಮಾಡಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಇನ್ನೂ ಎರಡು ವಾರಗಳು ಬೇಕು. ಬಾಲಕಿಗೆ ತನಗೆ ಏನಾಗಿದೆ ಎಂದು ತಿಳಿಯದಷ್ಟು ಚಿಕ್ಕ ವಯಸ್ಸು ಆಗಿರುವುದರಿಂದ ಅಗತ್ಯ ಇದ್ದರೆ ಆಪ್ತಸಮಾಲೋಚನೆ ನಡೆಸಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)