ರಕ್ತಸ್ರಾವ ರಹಿತ ರೋಬೊ ಶಸ್ತ್ರಚಿಕಿತ್ಸೆ

7

ರಕ್ತಸ್ರಾವ ರಹಿತ ರೋಬೊ ಶಸ್ತ್ರಚಿಕಿತ್ಸೆ

Published:
Updated:

ನವದೆಹಲಿ (ಐಎಎನ್‌ಎಸ್): ರಜನಿಕಾಂತ್ ಅವರ `ರೋಬೊ~ ಚಿತ್ರ ನೋಡಿದವರೆಲ್ಲ ಆ ಚಿತ್ರದಲ್ಲಿ ರೋಬೊ `ಚಿಟ್ಟಿ~ ಅಸಾಮಾನ್ಯ ಕೆಲಸ ಮಾಡಿರುವುದನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಯುವತಿಯೊಬ್ಬಳಿಗೆ ಹೆರಿಗೆ ಕಷ್ಟವಾಗಿ, ವೈದ್ಯರು ಸಹ ಕೈಚೆಲ್ಲಿದಾಗ `ಚಿಟ್ಟಿ~ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದನ್ನು ತೆರೆಯ ಮೇಲೆ ನೋಡಿದ್ದಾರೆ.ಆದರೆ, ಚಿತ್ರದಲ್ಲಿ ನೋಡಿದ ಇಂತಹ ಕಾಲ್ಪನಿಕ ದೃಶ್ಯ ಈಗ ನಿಜವಾಗುತ್ತಿದೆ. ದೇಶದ ಕೆಲ ಪ್ರತಿಷ್ಠಿತ ಆಸ್ಪತ್ರೆಗಳು `ರೋಬೊ~ಗಳನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸುವ ಅತ್ಯಾಧುನಿಕ ವಿಧಾನ ಅಳವಡಿಸಿಕೊಳ್ಳುತ್ತಿವೆ.ಈ ರೋಬೊ ಶಸ್ತ್ರಚಿಕಿತ್ಸೆಯಲ್ಲಿ ರಕ್ತಸ್ರಾವದ ಪ್ರಮಾಣ ಕಡಿಮೆ. ಶಸ್ತ್ರಚಿಕಿತ್ಸೆ ಅವಧಿ, ಆಸ್ಪತ್ರೆ ವಾಸದ ಅವಧಿ ಎಲ್ಲವೂ ಕಡಿಮೆ. ರೋಬೊದ ಕೈಗಳಿಗೆ ಕ್ಯಾಮೆರಾ ಅಳವಡಿಸುವುದರಿಂದ ಶಸ್ತ್ರಚಿಕಿತ್ಸೆ ನಡೆಸಬೇಕಾದ ಅಂಗದ ಮೂರು ಆಯಾಮದ ಚಿತ್ರಣ ವೈದ್ಯರಿಗೆ ಕಾಣುತ್ತದೆ.ಮನುಷ್ಯರ ಬೆರಳ ಗಾತ್ರದ ರೊಬೊದ ಯಾಂತ್ರಿಕ ಕೈಗಳು ಶಸ್ತ್ರಚಿಕಿತ್ಸೆ ಮಾಡಬೇಕಾದ ದೇಹದ ಅಂಗದ ಬಳಿ ಚರ್ಮವನ್ನು ಸಣ್ಣಗೆ ಕೊರೆಯುತ್ತವೆ. ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ದೊಡ್ಡದಾಗಿ, ಆಳವಾಗಿ ಕೊಯ್ಯಬೇಕಾದ ಜಾಗದಲ್ಲಿ ಸಣ್ಣಗೆ ಕೊಯ್ಯಲಾಗುತ್ತದೆ. ಹಾಗಾಗಿ ಈ ಶಸ್ತ್ರಚಿಕಿತ್ಸೆಯಲ್ಲಿ ರಕ್ತಸ್ರಾವ ಕಡಿಮೆ.ಈ ಶಸ್ತ್ರಚಿಕಿತ್ಸೆಗೆ 60 ಸಾವಿರದಿಂದ ರೂ 1.5 ಲಕ್ಷ ವೆಚ್ಚವಾಗುತ್ತದೆ. ಆದರೆ, ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆ ಮಾಡಬಹುದಾಗಿದೆ. ಹೃದ್ರೋಗ, ಸ್ತ್ರೀರೋಗ, ಮೂತ್ರಕೋಶ, ಹೊಟ್ಟೆ, ಎದೆ ಶಸ್ತ್ರಚಿಕಿತ್ಸೆಗಳಲ್ಲಿ ರೋಬೊ ಬಳಸಿಕೊಳ್ಳಬಹುದಾಗಿದೆ ಎಂದು ದೆಹಲಿಯ ಫೋರ್ಟಿಸ್ ಆಸ್ಪತ್ರೆಯ ಮುಖ್ಯಸ್ಥ ಸುಧೀರ್ ಶ್ರೀವಾಸ್ತವ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry