ಗುರುವಾರ , ಮೇ 6, 2021
33 °C

ರಕ್ಷಣಾ ಇಲಾಖೆ ಹಗರಣ: ಬಿಇಎಂಎಲ್ ಮುಖ್ಯಸ್ಥರೂ ಶಾಮೀಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಕ್ಷಣಾ ಇಲಾಖೆಯ ಹಗರಣಗಳಲ್ಲಿ ಬಿಇಎಂಎಲ್‌ನ ಮುಖ್ಯಸ್ಥ ವಿ.ಆರ್.ಎಸ್.ನಟರಾಜನ್ ಅವರ ಪಾತ್ರವೂ ಇದೆ~ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಪ್ರಸನ್ನ ಕುಮಾರ್ ಆರೋಪಿಸಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, `ರಕ್ಷಣಾ ಇಲಾಖೆಯ ಟೆಟ್ರಾ ವಾಹನ ಖರೀದಿಯಲ್ಲಿ ವಿ.ಆರ್.ಎಸ್. ನಟರಾಜನ್ ಅವರ ನೇರ ಪಾತ್ರವಿದೆ. ರಕ್ಷಣಾ ಇಲಾಖೆಯ ಹಗರಣಗಳು ಹೊರಬರುತ್ತಿರುವ ಸಂದರ್ಭದಲ್ಲಿಯೂ ನಟರಾಜನ್ ಅವರು ಯಾವುದೇ ಹೇಳಿಕೆ ನೀಡದೇ ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಮಗ್ರ ತನಿಖೆ ನಡೆದರೆ ಟೆಟ್ರಾ ಹಗರಣದಲ್ಲಿ ನಟರಾಜನ್ ಅವರೂ ಭಾಗಿಯಾಗಿರುವುದು ಸಾಬೀತಾಗಲಿದೆ~ ಎಂದು ಅವರು ತಿಳಿಸಿದರು.`ರಕ್ಷಣಾ ಇಲಾಖೆಯ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿದ್ದರೂ ಬಿಇಎಂಎಲ್ ಅನ್ನು ತನಿಖೆಯ ವ್ಯಾಪ್ತಿಗೆ ಸೇರಿಸಿಲ್ಲ. ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬಿಇಎಂಎಲ್‌ನ ಮುಖ್ಯಸ್ಥ ವಿ.ಆರ್.ಎಸ್. ನಟರಾಜನ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಬೇಕು. ವಿಚಾರಣೆ ಮುಗಿಯುವ ವರೆಗೂ ನಟರಾಜನ್ ಅವರನ್ನು ಅಮಾನತ್ತಿನಲ್ಲಿ ಇಡಬೇಕು~ ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ ಹಾಗೂ ಕೆ.ಮಹಾಂತೇಶ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.