ಮಂಗಳವಾರ, ಮೇ 17, 2022
26 °C

ರಕ್ಷಣೆಗೆ ಕಾಯುತ್ತಿರುವ ಶಿವಪಾರ್ವತಿ, ಶ್ರೀಗಳು

ವಿಜಯ್ ಹೂಗಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಕ್ಷಣೆಗೆ ಕಾಯುತ್ತಿರುವ ಶಿವಪಾರ್ವತಿ, ಶ್ರೀಗಳು

ಹಾವೇರಿ: ಶಿವ, ಪಾರ್ವತಿ ಹಾಗೂ ಹುಕ್ಕೇರಿಮಠದ ಲಿಂ. ಶಿವಲಿಂಗೇಶ್ವರ ಶ್ರೀಗಳು ಚರಂಡಿ ನೀರಿನಲ್ಲಿ ನಿಂತಿದ್ದರೆ, ಎದೆ ಹಾಲು ಉಣಿಸುತ್ತಿರುವ ತಾಯಿ ಅನಸೂಯಾ, ಕೈಯಲ್ಲಿ ತಂಬೂರಿ ಹಿಡಿದ ನಾರದ, ಜಪ ಮಾಡುತ್ತಿರುವ ಋಷಿಮುನಿ ಗಿಡದ ಬುಡದಲ್ಲಿ ಗೋಡೆ ಆಸರೆ ಪಡೆದಿದ್ದಾರೆ.ಇದೇನಿದು ದೇವಸ್ಥಾನ, ಮಠ ಮಂದಿರಗಳಲ್ಲಿ ಇರಬೇಕಾದ ಶಿವ ಪಾರ್ವತಿಯರು, ಶಿವಲಿಂಗ ಶ್ರೀಗಳು ಚರಂಡಿ ನೀರಿನಲ್ಲಿ ಇದ್ದಾರೆಯೇ ಎಂದು ಆಶ್ಚರ್ಯಪಡಬೇಡಿ, ಇದು ಆಶ್ಚರ್ಯ ವಾದರೂ ಸತ್ಯ. ಸ್ಥಳೀಯ ವಿಜಯನಗರ ದಲ್ಲಿನ ಶ್ರೀ ಮಾಲತೇಶ ಸಾಮಿಲ್‌ನೊಳಗೆ ಕಾಲಿಟ್ಟರೆ ಸಾಕು ಮೇಲಿನ ಎಲ್ಲ ದೇವತೆಗಳು ಇರುವ ಜಾಗೆ ನಿಮ್ಮ ಕಣ್ಣಿಗೆ ಗೋಚರಿಸುತ್ತದೆ.ಹೌದು, ನಗರದ ಸ್ವಾತಂತ್ರ್ಯಯೋಧ ಸೀತಾರಾಮಪ್ಪ ಓಂಕಾರಪ್ಪ ಕಮ್ಮಾರ ಎಂಬುವರು ವಿಜಾಪುರ ಇನ್ನಿತರ ಕಡೆ ಗಳಿಂದ ಕಲ್ಲನ್ನು ತರಿಸಿ ಬಹು ಆಸಕ್ತಿ ಯಿಂದ ಶಿವ, ಪಾರ್ವತಿ ಹಾಗೂ ಹುಕ್ಕೇರಿಮಠದ ಶಿವಲಿಂಗ ಶ್ರೀಗಳ ಮೂರ್ತಿಯನ್ನು ಒಂದೇ ಶಿಲೆಯಲ್ಲಿ ಕೆತ್ತನೆ ಮಾಡ್ದ್ದಿದಾರೆ. ಆದರೆ, ಮೂರ್ತಿ ಗಳು ಇಂದು ಸೂಕ್ತ ರಕ್ಷಣೆ ಇಲ್ಲದೆ ಚರಂಡಿ ನೀರಿನಲ್ಲಿ ನಿಂತಿವೆ.ಅದೇ ರೀತಿ ಯಾವುದೇ ರಕ್ಷಣೆ ಇಲ್ಲದೆ ಎದೆ ಹಾಲು ಉಣಿಸುತ್ತಿರುವ ತಾಯಿ ಅನುಸೂಯಾ, ಕೈಯಲ್ಲಿ ತಂಬೂರಿ ಹಿಡಿದ ನಾರದ, ಜಪ ಮಾಡುತ್ತಿರುವ ಋಷಿ, ಬ್ರಹ್ಮ, ವಿಷ್ಣು, ಮಹೇಶ ಬಾಲ ವಿಗ್ರಹಗಳು ಸಹ ಅದೇ ಸಾಮಿಲ್‌ನಲ್ಲಿ ಬಿಸಿಲು, ಮಳೆಗಳಿಗೆ ಮೈವೊಡ್ಡಿ ನಿಂತಿವೆ.ಈ ಅತ್ಯದ್ಭುತ ಶಿಲಾ ಕೃತಿಗಳನ್ನು ಕೆತ್ತನೆ ಮಾಡಲು ಹಲವು ವರ್ಷಗಳನ್ನು ತೆಗೆದುಕೊಂಡಿರುವ ಸ್ವಾತಂತ್ರ್ಯ ಯೋಧ ಸೀತಾರಾಮಪ್ಪನವರು, ಈ ಮೂರ್ತಿ ಗಳನ್ನು ಒಂದು ವ್ಯವಸ್ಥಿತ ಜಾಗೆ ಯಲ್ಲಿಟ್ಟು ಅವುಗಳಿಗೆ ಗೌರವ ಸಲ್ಲಿಸ ಬೇಕೆಂಬ ಬಯಕೆ ಹೊಂದಿದ್ದರು. ಆದರೆ, ಅದು ಈಡೇರುವ ಮುನ್ನವೇ ಅವರು ಇಹಲೋಕ ತ್ಯೇಜಿಸಿದರು.

 

ನಂತರದಲ್ಲಿ ಅವರ ಮಕ್ಕಳು ಮೊಮ್ಮಕ್ಕಳು ಆ ಕಾರ್ಯಕ್ಕೆ ಚಾಲನೆ ನೀಡಬೇಕೆಂಬ ಮಹದಾಸೆ ಹೊಂದಿದ್ದರೂ, ಸ್ಥಳೀಯ ಆಡಳಿತ, ಮಠಮಾನ್ಯಗಳಿಂದ ಸರಿಯಾದ ಸಹ ಕಾರ ದೊರೆಯದ ಕಾರಣ ಸೀತಾ ರಾಮಪ್ಪ ಅವರ ಆಸೆಯನ್ನು ಪೂರೈಸ ಲಾಗದೆ ಪಾಪ ಪ್ರಜ್ಞೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.ವಂಶಸ್ಥರ ನೋವು: ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸೀತಾರಾಮಪ್ಪ ಕಮ್ಮಾರ ಅವರು ನಿಧನದ ನಂತರ ಅವರ ಹಾಗೂ ಅವರ ಪತ್ನಿ ಸರಸ್ವತಿಯವರ ಸಮಾಧಿ ಯನ್ನು ಅದೇ ಸಾಮಿಲ್‌ನಲ್ಲಿ ನಿರ್ಮಿಸ ಲಾಗಿದೆ.ಆದರೆ, ನಗರದ ಚರಂಡಿ ನೀರು ಹರಿದು ಈ ಸಾಮಿಲ್‌ನೊಳಗೆ ನುಗ್ಗುವು ದರಿಂದ ಸಮಾಧಿ ಸುತ್ತ ಚರಂಡಿ ನೀರು ನಿಲ್ಲುತ್ತದೆ. ಅಷ್ಟೇ ಅಲ್ಲದೇ ಅವರ ಕೆತ್ತನೆ ಮಾಡಿರುವ ಶಿವ, ಪಾರ್ವತಿ, ಶಿವಲಿಂಗ ಶ್ರೀಗಳ ಏಕ ಶಿಲಾಮೂರ್ತಿ ಕೂಡಾ ಅಲ್ಲಿಯೇ ಇದೆ. ಅದಕ್ಕಾಗಿ ಚರಂಡಿ ನೀರು ಬರದಂತೆ ಮಾಡಬೇಕೆಂದು ಸ್ಥಳೀಯ ನಗರಸಭೆ ಯಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಮನವಿ ಸಲ್ಲಿಸಿದ್ದಾರೆ.ಆದರೆ, ಅವರ ಮನವಿಗೆ ಸ್ಪಂದಿಸುವುದಿರಲಿ. ಉತ್ತರಿಸುವ ಗೋಜಿಗೆ ಹೋಗಿಲ್ಲ. ಸ್ವಾತಂತ್ರ್ಯ ಯೋಧರಿಗೆ ಗೌರವ ಸಲ್ಲಿಸದ ಸರ್ಕಾರ, ಇನ್ನೂ ಅವರ ಕಲೆಗೆ ಗೌರವ ನೀಡ ಲಿದೆಯೇ ಎಂಬ ಬೇಸರದಿಂದ ಅವು ಗಳನ್ನು ಇದ್ದ ಜಾಗದಲ್ಲಿಯೆ ಬೀಡಲಾ ಗಿದೆ ಎಂದು ಸ್ವಾತಂತ್ರ್ಯಯೋಧ ಸೀತಾ ರಾಮಪ್ಪನವರ ಮೊಮ್ಮಗ ದೀಪಕ್ ಕಮ್ಮಾರ ನೋವಿನಿಂದಲೆ ಹೇಳುತ್ತಾರೆ.ಹಿಂದೊಮ್ಮೆ ಹುಕ್ಕೇರಿಮಠದ ಆವರಣದಲ್ಲಿ ಆ ಮೂರ್ತಿಯನ್ನು ಸ್ಥಾಪಿಸಲು ನಮ್ಮ ಮನೆಯ ಹಿರಿಯರು ನಿರ್ಧರಿಸಿದ್ದರು. ಆದರೆ, ಅದಕ್ಕೆ ಸೂಕ್ತ ಸಹಕಾರ ಸಿಗದ ಕಾರಣ, ಆ ಯೋಜನೆ ಕೂಡಾ ಅಲ್ಲಿಗೆ ನಿಂತು ಹೋಯಿತು. ನಮಗೆ ಆರ್ಥಿಕ ಸಹಾಯಬೇಕಿಲ್ಲ. ಆ ಮೂರ್ತಿಗಳಿರುವ ಹಾಗೂ ಸಮಾಧಿ ಇರುವ ಜಾಗದಲ್ಲಿ ಚರಂಡಿ ನೀರು ಬರದಂತೆ ಮಾಡಿಕೊಟ್ಟರೆ, ಆ ಶಿಲಾ ಮೂರ್ತಿಗಳನ್ನು ಒಂದೆಡೆ ಇಟ್ಟು ಸೂಕ್ತ ಗೌರವ ಸಲ್ಲಿಸುವುದರ ಜತೆಗೆ ನಮ್ಮ ಅಜ್ಜ, ಅಮ್ಮನವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಲಾಗುವುದು ಎಂದು ಹೇಳುತ್ತಾರೆ ದೀಪಕ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.