ಭಾನುವಾರ, ಏಪ್ರಿಲ್ 18, 2021
24 °C

ರಜನಿ ಬಗ್ಗೆ ದೀಪಿಕಾ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬ್ಬಾ... ರಜನಿ ಸರ್‌ಗೆ ಕೆಲಸದ ಬಗ್ಗೆ ಇರುವ ಅದಮ್ಯ ಪ್ರೀತಿಯನ್ನು ಅವರ ಕಂಗಳಲ್ಲಿಯೇ ನೋಡಬಹುದಾಗಿದೆ~ ಹೀಗೆ ದೀಪಿಕಾ ಪಡಕೋಣೆ ರಜನಿಕಾಂತ್ ಬಗ್ಗೆ ಮೆಚ್ಚುಗೆಯ ಮಹಾಪ್ರವಾಹವನ್ನೇ ಹರಿಸಿದ್ದಾರೆ.`ಅರವತ್ತೊಂದರ ಹರೆಯದಲ್ಲಿ ರಜನಿ ಸರ್, ಸೆಟ್ ಮೇಲೆ ಬಂದರೆ ಸಾಕು, ಅಲ್ಲೊಂದು ತಾಜಾತನದ ಅನುಭವವಾಗುತ್ತಿತ್ತು. ಅವರಲ್ಲಿರುವ ಹುಮ್ಮಸ್ಸು ಎಲ್ಲರಲ್ಲಿಯೂ ಹರಿಯುತ್ತಿತ್ತು. `ಕೊಚಾಡಿಯನ್~ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರದಿದ್ದರೆ ಮಹಾನ್ ವ್ಯಕ್ತಿಯೊಬ್ಬರ ಸಮೀಪ ದರ್ಶನವಾಗುವುದು ತಪ್ಪುತ್ತಿತ್ತು~ ಎಂದೆಲ್ಲ ದೀಪಿಕಾ ನವದೆಹಲಿಯಲ್ಲಿ ಹೇಳಿದ್ದಾರೆ.ಇದೊಂದು ವಿಭಿನ್ನ ಚಿತ್ರವಾಗಲಿದೆ. ರಜನಿಕಾಂತ್ ಅವರ ವೃತ್ತಿಪ್ರೀತಿಯೇ ಸೋಜಿಗ ಉಂಟು ಮಾಡುತ್ತದೆ. ಆ ಪ್ರೀತಿಯೇ ಅವರ ನರನಾಡಿಗಳಲ್ಲಿ ಉತ್ಸಾಹ ಚಿಮ್ಮುವಂತೆ ಮಾಡುತ್ತದೆ. ಕೆಲವೊಮ್ಮೆ ಚಿತ್ರೀಕರಣದ ಸಂದರ್ಭದಲ್ಲಿ ಅವರ ಉತ್ಸಾಹವನ್ನು ಬಿಟ್ಟಕಣ್ಣಿನಿಂದ ನಿಟ್ಟಿಸುತ್ತಲೇ ತಮ್ಮಲ್ಲೂ ಅದನ್ನು ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದರಂತೆ ದೀಪಿಕಾ.ಈ ಚಿತ್ರದಲ್ಲಿ ಗುಣಗ್ರಾಹಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದೂ ಹೊಸ ಅನುಭವವಾಗಿತ್ತು. ಈ ಇಡೀ ಚಿತ್ರವೇ ಅವರಲ್ಲಿ ಹೊಸ ಚೇತನವನ್ನು ತುಂಬಿದೆಯಂತೆ. ರಜನಿಕಾಂತ್ ಆರೋಗ್ಯ ಸುಧಾರಿಸಿದ ನಂತರದ ಮೊದಲ ಚಿತ್ರ ಇದಾಗಿದ್ದು, ಹಿಂದಿ, ಇಂಗ್ಲಿಷ್, ತಮಿಳು, ಜಪಾನಿ, ತೆಲುಗು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ರಜನಿಕಾಂತ್ ಮಗಳು ಐಶ್ವರ್ಯ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.