ರಜನಿ ರಾಣಾ

7

ರಜನಿ ರಾಣಾ

Published:
Updated:

‘ಎಂದಿರನ್’ ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ‘ರಾಣಾ’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅವರ ‘ಮುತ್ತು’ ಮತ್ತು ‘ಪಡೆಯಪ್ಪ’ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ಎಸ್.ರವಿಕುಮಾರ್ ಈ ಚಿತ್ರದ ಸಾರಥಿ. ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ತಯಾರಾಗುವ ಈ ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲಿ ಆರಂಭಗೊಳ್ಳಲಿದೆ. ಈ ಚಿತ್ರದಲ್ಲಿ ರಜನಿ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಶಿಷ್ಟವಾದ ಆಕ್ಷನ್ ಚಿತ್ರವನ್ನು ರೂಪಿಸುವುದು ಚಿತ್ರತಂಡದ ಉದ್ದೇಶ.ಎಂದಿನಂತೆ ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರ 2012ಕ್ಕೆ ಬಿಡುಗಡೆಯಾಗಲಿದ್ದು ರಜನಿ ಅಭಿಮಾನಿಗಳ ಬಯಸುವುದೆಲ್ಲಾ ಇದರಲ್ಲಿ ಇರಲಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry