ರಜನಿ ಹುಟ್ಟುಹಬ್ಬ

7

ರಜನಿ ಹುಟ್ಟುಹಬ್ಬ

Published:
Updated:
ರಜನಿ ಹುಟ್ಟುಹಬ್ಬ

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇಂದು 63ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ದೇಶ ವಿದೇಶದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಪಡೆದಿರುವ ರಜನಿ, ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಅವರಿಗೆ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಖುಷಿ ಒಂದೆಡೆಯಾದರೆ, ಅಭಿಮಾನಿಗಳಿಗೆ ತಮ್ಮಳಗಿನ ಅಭಿಮಾನವನ್ನು ವ್ಯಕ್ತಪಡಿಸುವ ಪುಳಕ. ಹಾಗಾಗಿ ನಗರದಲ್ಲಿರುವ ರಜನಿ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಣಿಯಾಗಿದ್ದಾರೆ.ಕರ್ನಾಟಕ ರಾಜ್ಯ ರಜನೀಜಿ ಸೇವಾ ಸಮಿತಿಯು ರಜನಿಕಾಂತ್ ಅವರು ವಿದ್ಯಾಭ್ಯಾಸ ಮಾಡಿದ ಕೆಂಪೇಗೌಡ ನಗರದ ಸರ್ಕಾರಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಲಿದೆ. ಇದರ ಅಂಗವಾಗಿ ಬೆಳಿಗ್ಗೆ 10.30ಕ್ಕೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ಹಮ್ಮಿಕೊಂಡಿದೆ. ಮಧ್ಯಾಹ್ನ 12ಕ್ಕೆ ಮಕ್ಕಳ ಜತೆಗೂಡಿ ಕೇಕ್ ಕತ್ತರಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮವೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry