ಶುಕ್ರವಾರ, ಮೇ 7, 2021
19 °C

ರಜೆಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರವು ಹಲವರು ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಘೋಷಿಸುತ್ತ ಬರುತ್ತಿದೆ. ಪ್ರತಿಯೊಬ್ಬರ ಜಯಂತಿಗೆ ಸಾರ್ವಜನಿಕ ರಜೆ ಘೋಷಿಸಿದರೆ, ಮುಂದಿನ ದಿನಗಳಲ್ಲಿ ಕೆಲಸ ಮಾಡುವುದನ್ನು ಬಿಟ್ಟು ವರ್ಷ ಪೂರ್ತಿ ಜಯಂತಿಗಳನ್ನು ಆಚರಿಸುತ್ತಾ ಕೂತಿರಬೇಕಾಗುವುದು.

 

ದೇಶಕ್ಕೆ ಈ ಮಹಾನ್ ವ್ಯಕ್ತಿಗಳ ಕೊಡುಗೆ ಅಪಾರ. ಅವರಿಗೆ ಗೌರವ ತೋರುವುದು ನಮ್ಮ ರಾಷ್ಟ್ರದ ಹಾಗೂ ಜನತೆಯ ಕರ್ತವ್ಯವಾಗಿದೆ. ಗೌರವದ ಹೆಸರಲ್ಲಿ ರಜೆಗಳನ್ನು ಅನುಭವಿಸುವುದು ಸಮಂಜಸವೇ? ದೇಶಕ್ಕಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಜಯಂತಿಯ ದಿನ ನಿರ್ಧಾರ ಮಾಡಿ ಆಚರಣೆ ಮಾಡುವುದು ತಪ್ಪಲ್ಲ.ಆದರೆ ಸರ್ಕಾರ ಜಯಂತಿಗಳನ್ನು ಘೋಷಣೆ ಮಾಡಿ ಜಯಂತಿಯ ಆಚರಣೆಯೊಂದಿಗೆ ಅಂದಿನ ಸೇವಾ ದಿನ ಮುಂದುವರೆಯಬೇಕು. ಕಡ್ಡಾಯವಾಗಿ ಕೆಲವು ದಿನಗಳ ರಜೆಗಳಾದ ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ, ಗಾಂಧಿ ಜಯಂತಿ ಹೀಗೆ ಹಲವು ಪ್ರಮುಖ ರಾಷ್ಟ್ರೀಯ ಹಬ್ಬಗಳಿಗೆ ರಜೆಗಳಿರುವಂತೆ ಅಂತೆಯೇ ಆಯಾ ಧರ್ಮದ ಪ್ರಮುಖ ಹಬ್ಬಗಳಿಗೆ ಮಾತ್ರ ರಜೆ ಇರಬೇಕು. ಈ ಮಹಾನ್ ವ್ಯಕ್ತಿಗಳ ಹೆಸರಲ್ಲಿ ಸರ್ಕಾರ ರಜೆಗಳು ಘೋಷಿಸಿ, ನೌಕರರ ವಿಶ್ವಾಸ ಆಯಾ ಸಮುದಾಯಗಳ ವಿಶ್ವಾಸ ಗಳಿಸಿಕೊಳ್ಳಬಹುದು. ಆದರೆ ಇದು ಪರೋಕ್ಷವಾಗಿ ಇನ್ನಿತರ ಸಮುದಾಯಗಳ ಮೇಲೆ ಆಡಳಿತದ ಮೇಲೆ ಪ್ರಭಾವ ಬಿದ್ದೇ ಬೀಳುತ್ತದೆ. ಸರ್ಕಾರ ಜಯಂತಿಗಳ ಘೋಷಣೆ ಮುಂಚೆ ವಿಶ್ಲೇಷಿಸಿಕೊಳ್ಳಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.