ರಜೆ ಘೋಷಣೆ: ವಾಲ್ಮೀಕಿ ಪರಿಷತ್ತಿನ ಸ್ವಾಗತ

7

ರಜೆ ಘೋಷಣೆ: ವಾಲ್ಮೀಕಿ ಪರಿಷತ್ತಿನ ಸ್ವಾಗತ

Published:
Updated:

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗಾಗಿ ಸರ್ಕಾರಿ ರಜೆ ಘೋಷಿಸಿರುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ವಾಲ್ಮೀಕಿ ನಾಯಕ ಪರಿಷತ್ತಿನ ರಾಜ್ಯ ಅಧ್ಯಕ್ಷ ಬಿ.ವಿ.ಬಸವರಾಜ ನಾಯಕ ಸ್ವಾಗತಿಸಿದ್ದಾರೆ.ಸಮುದಾಯದ ಒಳಿತಿಗಾಗಿ `ರಾಮಾಯಣ~ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಋಷಿಗಳು, ಜಗತ್ತಿಗೆ ಧರ್ಮ, ಶಿಕ್ಷಣ, ಸಮಾನತೆ, ರಾಜನೀತಿ ಭಕ್ತಿ, ತ್ಯಾಗ, ಸಮನ್ವಯತೆ, ಪ್ರಜಾಕಲ್ಯಾಣವನ್ನು ಹೇಳಿದರು. ಅಂತಹ ಮಹಿಮನ ಜಯಂತಿ ಆಚರಿಸುವುದು ಎಲ್ಲರ ಕರ್ತವ್ಯ, ಈ ಸಂದರ್ಭದಲ್ಲಿ ನಾಡಿನ ಜನತೆಗೆ ವಾಲ್ಮೀಕಿ ನಾಯಕ ಪರಿಷತ್ತು ಶುಭಾಶಯಗಳನ್ನು ಸಲ್ಲಿಸುತ್ತದೆ ಎಂದು ಬಸವರಾಜ ನಾಯಕ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

 

ರಾಜ್ಯ ಸರ್ಕಾರ ವಿಧಾನಸೌಧದ ಬ್ವಾಂಕೆಟ್‌ಹಾಲ್‌ನಲ್ಲಿ ಸರ್ಕಾರದ ವತಿಯಿಂದ ಮಂಗಳವಾರ ಬೆಳಿಗ್ಗೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry