ರಜ್ಜೋ ಪಾತ್ರದಲ್ಲಿ ಕಂಗನಾ ರಣೌತ್

7

ರಜ್ಜೋ ಪಾತ್ರದಲ್ಲಿ ಕಂಗನಾ ರಣೌತ್

Published:
Updated:

ಕಂಗನಾ ರಣೌತ್ ವಿಶ್ವಾಸ್ ಪಾಟೀಲ ನಿರ್ದೇಶನದ ಮೊದಲ ಚಿತ್ರ `ರಜ್ಜೋ'ಗೆ ಆಯ್ಕೆಯಾಗಿದ್ದಾರೆ. ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಕಂಗನಾ ಇದೇ ಹೆಸರಿನ ಪಾತ್ರಕ್ಕಾಗಿ `ಉಮರಾವ್‌ಜಾನ್' ಹಾಗೂ `ಪಾಕೀಜಾ'ದಂಥ ಚಿತ್ರಗಳನ್ನು ಚಿತ್ರ ಮೇಲಿಂದ ಮೇಲೆ ನೋಡುತ್ತಿದ್ದಾರಂತೆ.ವಿಶ್ವಾಸ್ ಪಾಟೀಲ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಯಾಗಿದ್ದು, ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಇದಾಗಿದೆ. ದಕ್ಷಿಣ ಮುಂಬೈನಲ್ಲಿ ಈಗಲೂ ಚಾಲ್ತಿಯಲ್ಲಿರುವ ಹಳೆಯ ಶೈಲಿಯ ಮುಜರಾ ಮನೆಗಳಿವೆ. ಈ ಮುಜರಾ ಮನೆಗಳ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಇದಂತೆ.ಮುಜರಾದ ಆಂಗಿಕ ಚಲನೆಗಳನ್ನು ಕಲಿಯಲು ಕಂಗನಾ ಇದೀಗ ಉತ್ಸುಕರಾಗಿದ್ದಾರೆ. ಸಂಪೂರ್ಣ ಸಂಗೀತಮಯ ಚಿತ್ರ ಇದಾಗಲಿದ್ದು, ಕ್ಲಾಸ್ ಹಾಗೂ ಮಾಸ್ ಎರಡನ್ನೂ ಸೆಳೆಯುವ ಗುಣ ಇದಕ್ಕಿದೆ ಎನ್ನುವುದು ವಿಶ್ವಾಸ್ ಪಾಟೀಲ್ ಅವರ ಭರವಸೆಯಾಗಿದೆ. `ಕಂಗನಾ ಮುಖದಲ್ಲಿ ಭಾರತೀಯ ಸ್ತ್ರೀಯ ನೋಟವಿದೆ. ಈ ಪಾತ್ರಕ್ಕೆ ಬೇಕಿರುವ ತುಂಟತನ, ಗಾಂಭೀರ್ಯ, ಲಜ್ಜೆ ಎಲ್ಲವನ್ನೂ ಕಂಗನಾ ಸಮರ್ಥವಾಗಿ ಮುಖದ ಮೇಲೆ ಬಿಂಬಿಸಬಲ್ಲರು. ಅವರೇ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಎನಿಸಿತು' ಎನ್ನುವುದು ವಿಶ್ವಾಸ್ ಅವರ ಮಾತು.`ರಜ್ಜೊ' ಚಿತ್ರ ಕತೆ ಕೇಳಿದಾಗಲೇ ಈ ಚಿತ್ರದ ಭಾಗವಾಗಬೇಕು ಎಂದು ಕಂಗನಾ ತೀರ್ಮಾನಿಸಿದ್ದರಂತೆ. `ಇದೊಂದು ಸಂಪೂರ್ಣ ವಿಭಿನ್ನವಾದ ಸವಾಲಿನ ಪಾತ್ರವಾಗಿದೆ. ಕಂಗಳಲ್ಲಿಯೇ ಭಾವನೆಗಳನ್ನು ವ್ಯಕ್ತಪಡಿಸುವ ವಿಶೇಷ ಚಿತ್ರ ಇದು. ಖುಷಿಯಿಂದಲೇ ಒಪ್ಪಿಕೊಂಡಿದ್ದೇನೆ. 2013ರಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ' ಎಂದೆಲ್ಲ ಹೇಳಿದ್ದಾರೆ.ವಿಕ್ರಮ್ ಭಟ್ ಈ ಚಿತ್ರದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry