ರಝಾ ಮುರಾದ್ ಮಗಬಾಲಿವುಡ್‌ಗೆ

7

ರಝಾ ಮುರಾದ್ ಮಗಬಾಲಿವುಡ್‌ಗೆ

Published:
Updated:

ತಮ್ಮ ಅಪರೂಪದ ಕಂಠದಿಂದಲೇ ಹೆಸರಾದ ರಝಾ ಮುರಾದ್, ತಮ್ಮ ಮಗ ಅಲಿ ಮುರಾದ್ ಸಹ ಬಾಲಿವುಡ್ ಪ್ರವೇಶಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

ಅಲಿ, ಲಂಡನ್‌ನಲ್ಲಿ ರಂಗಭೂಮಿಯಲ್ಲಿ ನಟನೆಯನ್ನು ಕಲಿಯುತ್ತಿದ್ದಾನೆ. ನಂತರ ಖಂಡಿತವಾಗಿಯೂ ಬಾಲಿವುಡ್ ಪ್ರವೇಶಿಸುತ್ತಾನೆ. ಆದರೆ ತನ್ನದೇ ಪರಿಶ್ರಮ ಹಾಗೂ ಪ್ರತಿಭೆಯಿಂದ ಹೆಸರು ಮಾಡುತ್ತಾನೆ. ಯಾವ ಕ್ಷೇತ್ರದಲ್ಲೂ ಕುಟುಂಬದಿಂದ ಹೆಸರು ಮಾಡುವುದು ಅಸಾಧ್ಯ. ನನ್ನ ಹೆಸರಿನ ಬಲದಿಂದ ಅಲಿ ಬೆಳೆಯುವುದಿಲ್ಲ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.`ಅಸರಾನಿ, ಪ್ರಾಣ್, ಜಗದೀಪ್ ಮುಂತಾದವರೆಲ್ಲ ತಮ್ಮ ಪ್ರತಿಭೆಯಿಂದಲೇ ತಮ್ಮ ಅಸ್ತಿತ್ವವನ್ನು ಸಾರಿದರು. ಯಾವುದೇ ಪಾತ್ರಗಳಿರಲಿ, ಚೊಕ್ಕದಾಗಿ ನಿರ್ವಹಿಸಿ, ಜನರ ಮನಸಿನಲ್ಲಿ ನೆಲೆ ಕಂಡುಕೊಂಡರು. ಅವರೇ ನಿಜವಾದ ಕಲಾವಿದರು. ಅಲಿಯೂ ಇಂಥ ಕಲಾವಿದನಾಗಲಿ' ಎಂಬುದು ಅವರಾಸೆಯಂತೆ.

`ಇದೀಗ ಕಲಾವಿದರು ತಮ್ಮ ಇಮೇಜ್ ಬಗ್ಗೆ ಪ್ರಜ್ಞಾಪೂರ್ವಕವಾಗಿ ಯೋಚಿಸಿ ಪ್ರಾಜೆಕ್ಟ್‌ಗಳನ್ನು ಕೈಗೊಳ್ಳುತ್ತಿದ್ದಾರೆ. ಇದು ಸಿನಿ ಪ್ರಪಂಚದ ಉತ್ತಮ ಬೆಳವಣಿಗೆಯಾಗಿದೆ. ಯಾರೂ ಯಾವ ಇಮೇಜ್‌ಗೂ ಅಂಟಿಕೊಳ್ಳಲು ಇಷ್ಟಪಡುತ್ತಿಲ್ಲ. ಎಲ್ಲ ಸವಾಲಿನ ಪಾತ್ರಗಳನ್ನೂ ಮಾಡುತ್ತಿದ್ದಾರೆ.

ಹಿರೋಯಿನ್‌ಗಳು ಸಹ `ನೆಗೆಟಿವ್' ರೋಲ್‌ಗಳನ್ನು ನಿರ್ವಹಿಸುವಲ್ಲಿ ಹಿಂಜರಿಯುತ್ತಿಲ್ಲ. ಇದೂ ಉತ್ತಮ ಬೆಳವಣಿಗೆಯಾಗಿದೆ' ಎನ್ನುವುದು ರಝಾ ಅವರ ಅಭಿಪ್ರಾಯ. ಕಿರುತೆರೆ, ಹಿರಿತೆರೆಗಳೆನ್ನುವ ಭೇದ ಇವರಿಗಿಲ್ಲವಂತೆ. ಎರಡು ಕಡೆಯೂ ಬೇರೆ ಬೇರೆ ಲಾಭಗಳಿವೆ. ನಷ್ಟ ಎಲ್ಲೂ ಕಂಡುಬಂದಿಲ್ಲ ಎನ್ನುವ ರಝಾ ಮುರಾದ್ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಸಂಜಯ್‌ಲೀಲಾ ಬನ್ಸಾಲಿ ಅವರ `ರಾಮ್‌ಲೀಲಾ' ಚಿತ್ರದಲ್ಲಿ ಸರಪಂಚನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧರ್ಮಾ ಪ್ರೊಡಕ್ಷನ್ಸ್‌ನ `ಉಂಗಲಿ' ಚಿತ್ರದಲ್ಲಿ ಪೊಲೀಸ್ ಕಮಿಷನರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry