ಮಂಗಳವಾರ, ಜೂನ್ 22, 2021
22 °C

ರಟ್ಟೀಹಳ್ಳಿ: ಪ್ರತಿಭಟನೆ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಟ್ಟೀಹಳ್ಳಿ: ಕರ್ನಾಟಕ ರಾಜ್ಯ ರೈತ ಸಂಘದ  (ಚುನಾವಣಾ ರಹಿತ) ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಸೋಮವಾರದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಶುಕ್ರವಾರ ಸಂಜೆ ಅಂತ್ಯಗೊಂಡಿತುಕರ್ನಾಟಕ ನೀರಾವರಿ ನಿಗಮದ ಶಿವಮೊಗ್ಗದ ಮುಖ್ಯ ಎಂಜಿನಿಯರ ಸಿ.ಸಿ.ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.ಬಸಿಯುವಿಕೆ ನೀರಿನ ಪರಿಹಾರ ನೀಡಲು ಶಿಫಾರಸ್ಸು ಮಾಡುವುದಲ್ಲದೇ, ಅಧಿಕಾರಿಗಳನ್ನು ಸೋಮವಾರ ವರ್ಗಾವಣೆ ಮಾಡಲಾಗುವುದು. ರೈತರು ಸಿವಿಲ್ ಕಾಮಗಾರಿಗಳಿಗೆ ಸಹಕಾರ ನೀಡಬೇಕು. ಎಲ್ಲ ಪರಿಹಾರಗಳನ್ನು ನಿಗದಿತ ದಿನಗಳಲ್ಲಿ ವಿತರಿಸಲಾಗುವುದು ಎಂದು ಪಾಟೀಲ್‌ ಭರವಸೆ ನೀಡಿದರು.ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆ ಹಿಂತೆಗೆದುಕೊಂಡು ಶನಿವಾರ ಹಮ್ಮಿಕೊಂಡಿದ್ದ ರಟ್ಟೀಹಳ್ಳಿ ರಾಸ್ತಾ ರೋಕೊ ನಡೆಸುವುದಿಲ್ಲ ಎಂದು ತಿಳಿಸಿದರು.ಇದಕ್ಕೂ ಮೊದಲು ಪ್ರತಿಭಟನಾ ಸ್ಥಳಕ್ಕೆ ಶಿವಮೊಗ್ಗದ ಕರ್ನಾಟಕ ನೀರಾವರಿ ನಿಗಮದ ಎಸ್ಇ ಯತೀಶ್ ಚಂದ್ರ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದರು.ಆದರೆ ಎಂಟು ಬೇಡಿಕೆಗಳಲ್ಲಿ ಮೂರು ಬೇಡಿಕೆಗಳು ವ್ಯವಸ್ಥಾಪಕ ನಿರ್ದೇಶಕರ ಅಡಿಯಲ್ಲಿ ಬರುವುದರಿಂದ ಅವರೇ ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಮತ್ತು ಕಾರ್ಯಪಾಲಕ ಎಂಜಿನಿಯರ ಓಲೆಕಾರ ಮತ್ತು ಬಸವೇಗೌಡ ಇವರನ್ನು ವರ್ಗಾವಣೆ ಮಾಡುವ ಕುರಿತಂತೆ ಯಾವುದೇ ಸಂಧಾನಕ್ಕೆ ಸಿದ್ದರಿಲ್ಲ ಎಂದು ಸಂಘದ ಪದಾಧಿಕಾರಿಗಳು  ತಿಳಿಸಿದರು.ಎಸ್ಇ ಯತೀಶ ಚಂದ್ರ ಮಾತನಾಡಿ, ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಪ್ರತಿಭಟನೆ ಮೊಟಕುಗೊಳಿಸಿ ಮನೆಗೆ ತೆರಳಿ ಹಬ್ಬವನ್ನು ಆಚರಿಸುವಂತೆ ವಿನಂತಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ಕಾರ್ಯಪಾಲಕ ಎಂಜಿನಿಯರ ಓಲೆಕಾರ ಮತ್ತು ಬಸವೇಗೌಡ ಇವರನ್ನು ವರ್ಗಾವಣೆ ಮಾಡುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದರು.ರಾಜ್ಯ ಉಪಾಧ್ಯಕ್ಷ ಗದಿಗೆಪ್ಪ ದಾನಮ್ಮನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಣ್ಣ ಹಲಗೇರಿ, ಜಿಲ್ಲಾಧ್ಯಕ್ಷ ಸುಭಾಸ ಗವಿಯಪ್ಪನವರ, ರಾಜು ಪೂಜಾರ, ಶಿವನಗೌಡ ಪಾಟೀಲ, ರಾಣೆಬೆನ್ನೂರ ತಾಲೂಕಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ಚಂದ್ರು ಜೋಗಿಹಳ್ಳಿ, ಮಲ್ಲನಗೌಡ ಸೊರಟೂರ, ರುದ್ರಗೌಡ ಪುಟ್ಟತಮ್ಮನವರ, ಬಸವರಾಜಪ್ಪ ಶಿವಣ್ಣನವರ, ಶಂಬಣ್ಣ ಗಂಗಾಯಿಕೊಪ್ಪ, ಜಗದೀಶ ಲಕ್ಕನಗೌಡ್ರ,  ಎಸ್.ಎಂ.ಮಾಜಿಗೌಡ್ರ, ದ್ಯಾವಪ್ಪ ಸೊರಟೂರ, ಎಂಜಿನಿಯರ ಕುಮಾರಸ್ವಾಮಿ  ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.