ರಣಜಿ ಆಡಲು ತೆರಳಿದ ಭಜ್ಜಿ, ರಹಾನೆ

7

ರಣಜಿ ಆಡಲು ತೆರಳಿದ ಭಜ್ಜಿ, ರಹಾನೆ

Published:
Updated:

ಕೋಲ್ಕತ್ತ: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆಯದ ಹರಭಜನ್ ಸಿಂಗ್, ಅಶೋಕ್ ದಿಂಡಾ ಹಾಗೂ ಅಜಿಂಕ್ಯ ರಹಾನೆ ಅವರಿಗೆ ರಣಜಿ ಟೂರ್ನಿಯಲ್ಲಿ ಆಡುವಂತೆ ಬಿಸಿಸಿಐ ಹೇಳಿದೆ.ಹಾಗಾಗಿ ಹರಭಜನ್ ಪಂಜಾಬ್ ಪರ, ರಹಾನೆ ಮುಂಬೈ ಹಾಗೂ ದಿಂಡಾ ಪಶ್ಚಿಮ ಬಂಗಾಳ ತಂಡದಲ್ಲಿ ಆಡಲು ಗುರುವಾರ ತೆರಳಿದರು. ಶನಿವಾರ ರಣಜಿ ಪಂದ್ಯಗಳು ಆರಂಭವಾಗಲಿವೆ. ಈ ಕಾರಣ ಭಾರತ ತಂಡದಲ್ಲಿ ಈಗ ಹೆಚ್ಚುವರಿ ಆಗಿ ಉಳಿದಿರುವುದು ಮುರಳಿ ವಿಜಯ್ ಮಾತ್ರ. ವಿಜಯ್ ಈ ಪಂದ್ಯದ 12ನೇ ಆಟಗಾರ. ಹಾಗಾಗಿ ಅವರು ಇಲ್ಲಿಯೇ ಇದ್ದಾರೆ ವಿಜಯ್ ಆಟಗಾರರಿಗೆ ತಂಪು ಪಾನೀಯ ನೀಡುವ ಕೆಲಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry