ರಣಜಿ: ಉತ್ತರ ಪ್ರದೇಶಕ್ಕೆ ಜಯ

7

ರಣಜಿ: ಉತ್ತರ ಪ್ರದೇಶಕ್ಕೆ ಜಯ

Published:
Updated:

ಚೆನ್ನೈ (ಪಿಟಿಐ): ಅಲಿ ಮೂರ್ತುಜಾ (ಒಟ್ಟು ಹತ್ತು ವಿಕೆಟ್) ಅವರ ಶಿಸ್ತಿನ ಬೌಲಿಂಗ್ ನೆರವಿನಿಂದ ಉತ್ತರ ಪ್ರದೇಶ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 195 ರನ್‌ಗಳ ಭರ್ಜರಿ ಪಡೆಯಿತು.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ರೀಡಾಂಗಣದಲ್ಲಿ ಮಂಗಳವಾರ ಈ ಪಂದ್ಯ ಕೊನೆಗೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 179 ರನ್‌ಗಳಿಗೆ ಆಲ್‌ಔಟ್ ಆಗಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ಎರಡನೇ ಇನಿಂಗ್ಸ್‌ನಲ್ಲಿ 65 ಓವರ್‌ಗಳಲ್ಲಿ 225 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಎರಡೂ ಇನಿಂಗ್ಸ್ ಸೇರಿ ಐದು ವಿಕೆಟ್ ಕಬಳಿಸಿದ ಪ್ರವೀಣ್ ಗುಪ್ತಾ ಅವರು ಉತ್ತರ ಪ್ರದೇಶಕ್ಕೆ ಗೆಲುವು ತಂದುಕೊಟ್ಟರು.ಸಂಕ್ಷಿಪ್ತ ಸ್ಕೋರು: ಉತ್ತರ ಪ್ರದೇಶ 128.5 ಓವರ್‌ಗಳಲ್ಲಿ 392 ಹಾಗೂ ದ್ವಿತೀಯ ಇನಿಂಗ್ಸ್ 71.3 ಓವರ್‌ಗಳಲ್ಲಿ 207. ತಮಿಳುನಾಡು 69.5 ಓವರ್‌ಗಳಲ್ಲಿ 179 ಮತ್ತು ಎರಡನೇ ಇನಿಂಗ್ಸ್ 65 ಓವರ್‌ಗಳಲ್ಲಿ 65 ಓವರ್‌ಗಳಲ್ಲಿ 225. ಫಲಿತಾಂಶ: ಉತ್ತರ ಪ್ರದೇಶಕ್ಕೆ 195 ರನ್ ಗೆಲುವು.ಗುಜರಾತ್ ಪ್ರಥಮ ಇನಿಂಗ್ಸ್ 93.2 ಓವರ್‌ಗಳಲ್ಲಿ 266 ಹಾಗೂ 68.5 ಓವರ್‌ಗಳಲ್ಲಿ 232. ಪಂಜಾಬ್ ಮೊದಲ ಇನಿಂಗ್ಸ್ 96 ಓವರ್‌ಗಳಲ್ಲಿ 268 ಮತ್ತು 57.5 ಓವರ್‌ಗಳಲ್ಲಿ 193. ಫಲಿತಾಂಶ: ಗುಜರಾತ್‌ಗೆ 37 ರನ್ ಗೆಲುವು ಹಾಗೂ ಆರು ಅಂಕ.ವಿದರ್ಭ 93.5 ಓವರ್‌ಗಳಲ್ಲಿ 206 ಮತ್ತು ಎರಡನೇ ಇನಿಂಗ್ಸ್ 58.1 ಓವರ್‌ಗಳಲ್ಲಿ 140. ಒಡಿಶಾ 50.2 ಓವರ್‌ಗಳಲ್ಲಿ 121ಹಾಗೂ ದ್ವಿತೀಯ ಇನಿಂಗ್ಸ್ 40.1 ಓವರ್‌ಗಳಲ್ಲಿ 119. ಫಲಿತಾಂಶ: ವಿದರ್ಭಕ್ಕೆ 106 ರನ್‌ಗಳ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry