ರಣಜಿ: ಕರ್ನಾಟಕ ಸೆಮಿಫೈನಲ್‌ ಪ್ರವೇಶ

7

ರಣಜಿ: ಕರ್ನಾಟಕ ಸೆಮಿಫೈನಲ್‌ ಪ್ರವೇಶ

Published:
Updated:

ಬೆಂಗಳೂರು (ಪಿಟಿಐ): ರಣಜಿ ಟ್ರೋಪಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ರಣಜಿ ತಂಡ ಉತ್ತರ ಪ್ರದೇಶ ವಿರುದ್ಧ 92 ರನ್‌ಗಳ  ಭರ್ಜರಿ ಜಯ ದಾಖಲಿಸುವ  ಮೂಲಕ ಸೆಮಿಫೈನಲ್‌ ಪ್ರವೇಶಿಸಿದೆ.ಕುತೂಹಲ ಮೂಡಿಸಿದ್ದ  ಈ ಪಂದ್ಯದಲ್ಲಿ ಕರ್ನಾಟಕ ಉತ್ತಮ ದಾಳಿ ಸಂಘಟಿಸಿ ಗೆಲುವಿನ ನಗೆ ಬೀರಿತು. ಶ್ರೇಯಸ್ ಗೋಪಾಲ್ ಅವರ ಮಾರಕ ದಾಳಿಗೆ ತತ್ತರಿಸಿದ ಉತ್ತರ  ಪ್ರದೇಶ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 204 ರನ್‌ಗಳಿಗೆ ಸರ್ವಪತನ ಕಂಡಿತು. ಶ್ರೇಯಸ್ ಗೋಪಾಲ್‌ ಐದು ವಿಕೆಟ್‌ ಕಬಳಿಸಿ ಗೆಲುವಿನ ರುವಾರಿಯಾದರು.ಕರ್ನಾಟಕದ ಬೌಲರ್‌ಗಳ ಎದುರು ಉತ್ತರ ಪ್ರದೇಶದ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.ಸಂಕ್ಷಿಪ್ತ ಸ್ಕೋರ್:

ಕರ್ನಾಟಕ; 349 ಮತ್ತು 204

ಉತ್ತರ ಪ್ರದೇಶ: 221/9 ಮತ್ತು 240

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry