ರಣಜಿ: ಕ್ವಾರ್ಟರ್‌ ಫೈನಲ್‌ಗೆ ಮುಂಬೈ

7

ರಣಜಿ: ಕ್ವಾರ್ಟರ್‌ ಫೈನಲ್‌ಗೆ ಮುಂಬೈ

Published:
Updated:

ವಲ್ಸದ್‌ (ಪಿಟಿಐ): ಮುಂಬೈ ತಂಡ ಲೀಗ್‌ ಹಂತದಿಂದಲೇ ಹೊರ ಬೀಳುವ ಅಪಾಯದಿಂದ ಪಾರಾಗಿದೆ. ಇಕ್ಬಾಲ್‌ ಅಬ್ದುಲ್ಲಾ ಮತ್ತು ವಿಶಾಲ್ ದಾಭೋ­ಲ್ಕರ್ ಪ್ರಭಾವಿ ಬೌಲಿಂಗ್‌ ನೆರವಿನಿಂದ ಮುಂಬೈ ಆಟಗಾರರು ಗುಜರಾತ್‌ ಎದುರು ರೋಚಕ ಗೆಲುವು ಪಡೆದು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ‘ಎ’ ಗುಂಪಿನಿಂದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕ್ರೀಡಾಂಗಣದಲ್ಲಿ ಗುರುವಾರ ಕೊನೆ ಗೊಂಡ ಪಂದ್ಯದಲ್ಲಿ ಹಾಲಿ ಚಾಂಪಿ ಯನ್ನರು 27 ರನ್‌ಗಳ ಗೆಲುವು ಸಾಧಿಸಿದರು.ಈ ಗೆಲುವಿ­ನೊಂದಿಗೆ ಆರು ಪಾಯಿಂಟ್‌ ಪಡೆದ ಮುಂಬೈ ಒಟ್ಟು 29 ಪಾಯಿಂಟ್‌­ಗಳೊಂದಿಗೆ ಅಂಕ ಪಟ್ಟಿ ಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 26 ಪಾಯಿಂಟ್ಸ್‌್ ಹೊಂದಿರುವ ಗುಜರಾತ್‌ ಟೂರ್ನಿಯಿಂದ ಹೊರಬಿತ್ತು. ‘ಎ’ ಗುಂಪಿನಿಂದ ಕರ್ನಾ ಟಕ ಮತ್ತು ಪಂಜಾಬ್‌ ಈಗಾಗಲೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ.ಸಂಕ್ಷಿಪ್ತ ಸ್ಕೋರು: ಮಂಬೈ 52.5 ಓವರ್‌ಗಳಲ್ಲಿ 154 ಮತ್ತು 103.3 ಓವರ್‌ಗಳಲ್ಲಿ 273; ಗುಜರಾತ್‌ 104.2 ಓವರ್‌ಗಳಲ್ಲಿ 253 ಹಾಗೂ 56 ಓವರ್‌ಗಳಲ್ಲಿ 147. (ಅಕ್ಷರ ಪಟೇಲ್‌ 65; ಇಕ್ಬಾಲ್‌ ಅಬ್ದುಲ್ಲಾ 44ಕ್ಕೆ5, ವಿಶಾಲ್ ದಾಭೋಲ್ಕರ್ 33ಕ್ಕೆ4, ಸೂರ್ಯಕುಮಾರ್‌ ಯಾದವ್‌ 15ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry