ರಣಜಿ ಕ್ವಾರ್ಟರ್‌ ಫೈನಲ್‌ ನಾಳೆಯಿಂದ

7

ರಣಜಿ ಕ್ವಾರ್ಟರ್‌ ಫೈನಲ್‌ ನಾಳೆಯಿಂದ

Published:
Updated:

ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ ಬುಧವಾರ ಆರಂಭವಾಗಲಿದ್ದು, ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳು ಪೈಪೋಟಿ ನಡೆಸಲಿವೆ.‘ಎ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಎಂಟರ ಘಟ್ಟ ತಲುಪಿರುವ ವಿನಯ್‌ ಕುಮಾರ್‌ ಸಾರಥ್ಯದ ಆತಿಥೇಯರು ಸೆಮಿಫೈನಲ್‌ ಪ್ರವೇಶಿ ಸುವ ಗುರಿ ಹೊಂದಿದ್ದಾರೆ.‘ಬಿ’ ಗುಂಪಿನಿಂದ ಕ್ವಾರ್ಟರ್‌ ಫೈನಲ್‌ ತಲುಪಿರುವ ಉತ್ತರ ಪ್ರದೇಶ  24 ಪಾಯಿಂಟ್‌ ಕಲೆ ಹಾಕಿ ಎರಡನೇ ಸ್ಥಾನ ಪಡೆದಿದೆ.2011ರಲ್ಲಿ ಉಭಯ ತಂಡಗಳ ನಡುವೆ ಶಿವಮೊಗ್ಗದಲ್ಲಿ ಲೀಗ್‌ ಪಂದ್ಯ ನಡೆದಿತ್ತು. ಆ ಪಂದ್ಯ ಡ್ರಾ ಆಗಿತ್ತು. ಮೂರು ವರ್ಷದ ಬಳಿಕ ಕರ್ನಾಟಕ ತವರು ನೆಲದಲ್ಲಿ ಉತ್ತರ ಪ್ರದೇಶದ ಎದುರು ಪಂದ್ಯ ವನ್ನಾಡಲಿದೆ. ಉತ್ತರ ಪ್ರದೇಶವೂ ಸೆಮಿಫೈನಲ್‌ ಪ್ರವೇಶಿಸುವ ಕನಸು ಹೊಂದಿದೆ. ಈ ತಂಡ ಹೋದ ವರ್ಷ ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ವಿಸಸ್‌್ ತಂಡದ ಎದುರು ಸೋಲು ಕಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry