ರಣಜಿ: ಕ್ವಾರ್ಟರ್‌ ಫೈನಲ್‌ ಸ್ಥಳ ನಿರ್ಧಾರ

7

ರಣಜಿ: ಕ್ವಾರ್ಟರ್‌ ಫೈನಲ್‌ ಸ್ಥಳ ನಿರ್ಧಾರ

Published:
Updated:

ಮುಂಬೈ (ಪಿಟಿಐ): ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಬೆಂಗಳೂರು, ಮುಂಬೈ, ಕೋಲ್ಕತ್ತ, ಮತ್ತು ವಡೋದರದಲ್ಲಿ ನಡೆಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.ಜನವರಿ 8ರಿಂದ 12ರ ವರೆಗೆ ಕ್ವಾರ್ಟರ್‌ ಫೈನಲ್ ಪಂದ್ಯಗಳು ನಡೆಯಲಿವೆ. ಟೂರ್ನಿಯ ಕೊನೆಯ ಸುತ್ತಿನ ಲೀಗ್‌ ಪಂದ್ಯಗಳು ಗುರುವಾರ (ಜ. 2) ಮುಕ್ತಾಯವಾಗಲಿದ್ದು, ಯಾವ ತಂಡಗಳು ಎಂಟರ ಘಟ್ಟ ಪ್ರವೇಶಿಸಲಿವೆ ಎನ್ನುವುದು ಗೊತ್ತಾಗಲಿದೆ.

‘ಚಿನ್ನಸ್ವಾಮಿ (ಬೆಂಗಳೂರು), ವಾಂಖೆಡೆ (ಮುಂಬೈ), ಈಡನ್‌ ಗಾರ್ಡನ್‌ (ಕೋಲ್ಕತ್ತ) ಮತ್ತು ಮೋತಿ ಬಾಗ್‌ (ವಡೋದರ) ಕ್ರೀಡಾಂಗಣದಲ್ಲಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಬಿಸಿಸಿಐ ಜನರಲ್‌ ಮ್ಯಾನೇಜರ್‌ (ಕ್ರೀಡಾಭಿವೃದ್ಧಿ) ತಿಳಿಸಿದ್ದಾರೆ.‘ಸೆಮಿಫೈನಲ್‌ ಪಂದ್ಯಗಳು ಜ. 18ರಿಂದ ಮತ್ತು ಫೈನಲ್‌ ಜ. 29ರಿಂದ ನಡೆಯಲಿವೆ. ಈ ಪಂದ್ಯಗಳು ನಡೆಯುವ ಸ್ಥಳವನ್ನು ಮುಂದಿನ ದಿನಗಳಲ್ಲಿ ನಿಗದಿಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry