ಸೋಮವಾರ, ಅಕ್ಟೋಬರ್ 14, 2019
24 °C

ರಣಜಿ: ಫೈನಲ್‌ಗೆ ತಮಿಳುನಾಡು

Published:
Updated:

ಮುಂಬೈ (ಪಿಟಿಐ): ತಮಿಳುನಾಡು ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಕೊನೆಗೊಂಡ ಮುಂಬೈ ವಿರುದ್ಧದ ಸೆಮಿಫೈನಲ್ ಪಂದ್ಯ ನಿರೀಕ್ಷೆಯಂತೆಯೇ ಡ್ರಾದಲ್ಲಿ ಕೊನೆಗೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ತಮಿಳುನಾಡು ಫೈನಲ್‌ಗೆ ಲಗ್ಗೆಯಿಟ್ಟಿತು.

ಮೊದಲ ಇನಿಂಗ್ಸ್‌ನಲ್ಲಿ 202 ರನ್‌ಗಳ ಭಾರಿ ಮುನ್ನಡೆ ಪಡೆದಿದ್ದ ಬಾಲಾಜಿ ಬಳಗ ಅಂತಿಮ ದಿನವಾದ ಶುಕ್ರವಾರ ಎಂಟು ವಿಕೆಟ್‌ಗೆ 331 ರನ್ ಗಳಿಸಿ ತನ್ನ ಎರಡನೇ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತು.

ಗೆಲುವಿಗೆ 44 ಓವರ್‌ಗಳಲ್ಲಿ 534 ರನ್ ಗಳಿಸುವ ಅಸಾಧ್ಯ ಗುರಿ ಪಡೆದ ಮುಂಬೈ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ವೇಳೆ ಎರಡನೇ ಇನಿಂಗ್ಸ್‌ನಲ್ಲಿ 29 ಓವರ್‌ಗಳಲ್ಲಿ 3 ವಿಕೆಟ್‌ಗೆ 88 ರನ್ ಗಳಿಸಿತ್ತು. ನಡೆಯಲಿಲ್ಲ.

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಜನವರಿ 19 ರಿಂದ ಐದು ದಿನಗಳ ಕಾಲ ನಡೆಯುವ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ರಾಜಸ್ತಾನದ ಜೊತೆ ಪೈಪೋಟಿ ನಡೆಸಲಿದೆ.

ಸಂಕ್ಷಿಪ್ತ ಸ್ಕೋರ್: ತಮಿಳುನಾಡು: ಮೊದಲ ಇನಿಂಗ್ಸ್ 359 ಮತ್ತು ಎರಡನೇ ಇನಿಂಗ್ಸ್ 8 ವಿಕೆಟ್‌ಗೆ 331 ಡಿಕ್ಲೇರ್ಡ್ (ಮುರಳಿ ವಿಜಯ್ 142, ಆರ್. ಪ್ರಸನ್ನ 44, ಬಲ್ವಿಂದರ್ ಸಂಧು 74ಕ್ಕೆ 5). ಮುಂಬೈ: ಮೊದಲ ಇನಿಂಗ್ಸ್ 157 ಮತ್ತು ಎರಡನೇ ಇನಿಂಗ್ಸ್ 29 ಓವರ್‌ಗಳಲ್ಲಿ 3 ವಿಕೆಟ್‌ಗೆ 88 (ಹಿಕೇನ್ ಶಾ ಅಜೇಯ 29, ಸೂರ್ಯಕುಮಾರ್ ಯಾದವ್ 33, ಜಗನ್ನಾಥನ್ ಕೌಶಿಕ್ 6ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ; ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಫೈನಲ್‌ಗೆ ತಮಿಳುನಾಡು.

Post Comments (+)