ಶನಿವಾರ, ಜನವರಿ 18, 2020
18 °C

ರಣಜಿ: ಮುಂಬೈಗೆ ಕೌಸ್ತುಭ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್ (ಪಿಟಿಐ/ಐಎಎನ್‌ಎಸ್): ಕೌಸ್ತುಭ್ ಪವಾರ್ (160) ಗಳಿಸಿದ ಅಜೇಯ ಶತಕದ ನೆರವಿನಿಂದ ಮುಂಬೈ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ.ಇಂದೋರ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ಗೆ 346 ರನ್ ಗಳಿಸಿದೆ. ವಾಸೀಮ್ ಜಾಫರ್ ಬಳಗ 5 ವಿಕೆಟ್‌ಗೆ 70 ರನ್‌ಗಳಿಂದ ಆಟ ಆರಂಭಿಸಿತ್ತು.ಈಗಾಗಲೇ 322 ಎಸೆತಗಳನ್ನು ಎದುರಿಸಿರುವ ಕೌಸ್ತುಭ್ 19 ಬೌಂಡರಿ ಗಳಿಸಿದ್ದಾರೆ. ಅವರು ಆರನೇ ವಿಕೆಟ್‌ಗೆ ಹಿಕೇನ್ ಶಾ (41) ಜೊತೆ 79 ಹಾಗೂ ಏಳನೇ ವಿಕೆಟ್‌ಗೆ ಧವಳ್ ಕುಲಕರ್ಣಿ (40) ಜೊತೆ 78 ರನ್ ಸೇರಿಸಿದರು. ಆ ಬಳಿಕ ಮುರಿಯದ ಎಂಟನೇ ವಿಕೆಟ್‌ಗೆ ಅಂಕಿತ್ ಚವಾಣ್ (ಬ್ಯಾಟಿಂಗ್ 57) ಜೊತೆ 129 ರನ್ ಸೇರಿಸಿದರು. ಇದೀಗ ಮುಂಬೈ 154 ರನ್‌ಗಳ ಮುನ್ನಡೆ ಪಡೆದಿದೆ.ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ತಮಿಳುನಾಡು ತಂಡ ಮಹಾರಾಷ್ಟ್ರ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆದಿದೆ. ಎದುರಾಳಿ ತಂಡವನ್ನು 232 ರನ್‌ಗಳಿಗೆ ನಿಯಂತ್ರಿಸಿದ ತಮಿಳುನಾಡು ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 83 ಓವರ್‌ಗಳಲ್ಲಿ 3 ವಿಕೆಟ್‌ಗೆ 259 ರನ್ ಗಳಿಸಿದೆ.ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ತಾನ ಆತಿಥೇಯರ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 421 ರನ್ ಗಳಿಸಿತು. ಎರಡನೇ ದಿನದಾಟದ ಅಂತ್ಯಕ್ಕೆ ಹೈದರಾಬಾದ್ 10 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 35 ರನ್ ಕಲೆಹಾಕಿದೆ.ಸಂಕ್ಷಿಪ್ತ ಸ್ಕೋರ್: ಮಧ್ಯಪ್ರದೇಶ: ಮೊದಲ ಇನಿಂಗ್ಸ್ 55.1 ಓವರ್‌ಗಳಲ್ಲಿ 192 ಮುಂಬೈ: ಮೊದಲ ಇನಿಂಗ್ಸ್ 133 ಓವರ್‌ಗಳಲ್ಲಿ 7 ವಿಕೆಟ್‌ಗೆ 346 (ಕೌಸ್ತುಭ್ ಪವಾರ್ ಬ್ಯಾಟಿಂಗ್ 160, ಹಿಕೇನ್ ಶಾ 41, ಧವಳ್ ಕುಲಕರ್ಣಿ 40, ಅಂಕಿತ್ ಚವಾಣ್ ಬ್ಯಾಟಿಂಗ್ 57, ಟಿ.ಪಿ. ಸುಧೀಂದ್ರ 78ಕ್ಕೆ 4).ಮಹಾರಾಷ್ಟ್ರ: ಮೊದಲ ಇನಿಂಗ್ಸ್ 93 ಓವರ್‌ಗಳಲ್ಲಿ 232 (ದಿಲಿಪ್ ಅಟಿತ್ಕರ್ 50, ಜಗನ್ನಾಥನ್ ಕೌಶಿಕ್ 56ಕ್ಕೆ 5, ಆಶಿಕ್ ಶ್ರೀನಿವಾಸ್ 64ಕ್ಕೆ 2). ತಮಿಳುನಾಡು: ಮೊದಲ ಇನಿಂಗ್ಸ್ 83 ಓವರ್‌ಗಳಲ್ಲಿ 3 ವಿಕೆಟ್‌ಗೆ 259 (ಅಭಿನವ್ ಮುಕುಂದ್ 95, ಮುರಳಿ ವಿಜಯ್ 79, ಎಸ್. ಬದರೀನಾಥ್ ಬ್ಯಾಟಿಂಗ್ 35).ರಾಜಸ್ತಾನ: ಮೊದಲ ಇನಿಂಗ್ಸ್: 167.1 ಓವರ್‌ಗಳಲ್ಲಿ 421 (ಆಕಾಶ್ ಚೋಪ್ರಾ 142, ದಿಶಾಂತ್ ಯಾಗ್ನಿಕ್ 101, ಪಂಕಜ್ ಸಿಂಗ್ 42, ಮೆಹ್ದಿ ಹಸನ್ 62ಕ್ಕೆ 5). ಹೈದರಾಬಾದ್: ಮೊದಲ ಇನಿಂಗ್ಸ್ 10 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 35

ಪ್ರತಿಕ್ರಿಯಿಸಿ (+)