ರಣಜಿ: ಮುಂಬೈಗೆ ಮುಖಭಂಗ

7

ರಣಜಿ: ಮುಂಬೈಗೆ ಮುಖಭಂಗ

Published:
Updated:

ಮುಂಬೈ (ಪಿಟಿಐ): ಹಾಲಿ ಚಾಂಪಿಯನ್‌ ಮುಂಬೈ ತಂಡದವರು ಈ ಸಲದ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮಹಾರಾಷ್ಟ್ರದ ಎದುರು ಸೋಲು ಕಂಡು ಮುಖಭಂಗ ಅನುಭವಿಸಿದರು.ವಾಂಖೆಡೆ ಕ್ರೀಡಾಂಗಣದಲ್ಲಿ ನಾಲ್ಕೇ ದಿನದಲ್ಲಿ ಮುಗಿದ ಪಂದ್ಯದಲ್ಲಿ ರೋಹಿತ್‌ ಮೋಟ್ವಾನಿ ಸಾರಥ್ಯದ ಮಹಾರಾಷ್ಟ್ರ ಎಂಟು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು.ಮಹಾರಾಷ್ಟ್ರ ಗೆಲುವು ಸಾಧಿಸಬೇಕಾದರೆ 252 ರನ್‌ ಗಳಿಸಬೇಕಿತ್ತು. ಈ ತಂಡ ಎರಡನೇ ಇನಿಂಗ್ಸ್‌ನಲ್ಲಿ 65.1 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಮುಂಬೈ ತಂಡದ ಹಿರಿಯ ಆಟಗಾರರಾದ ಜಹೀರ್‌ ಖಾನ್‌, ಶಾರ್ದುಲ್‌ ಠಾಕೂರ್‌ ಅವರ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಹಾರಾಷ್ಟ್ರದ ವಿಜಯ್‌ ಜೋಲ್‌ (ಅಜೇಯ 91, 258ನಿಮಿಷ, 180ಎಸೆತ, 13 ಬೌಂ.) ಮತ್ತು      ಕೇದಾರ್‌ ಜಾಧವ್‌ (ಅಜೇಯ 120, 144ಎ. 14 ಬೌಂ. 3 ಸಿಕ್ಸರ್‌) ಗೆಲುವಿನ ರೂವಾರಿ ಎನಿಸಿದರು. ಜೊತೆಗೆ ಜಾಧವ್‌ ಈ ಸಲದ ರಣಜಿಯಲ್ಲಿ 1000 ರನ್‌ ಗಳಿಸಿದ ಸಾಧನೆ ಮಾಡಿದರು.ಹೋದ ವರ್ಷ ಮುಂಬೈ ತಂಡ ಇದೇ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ಎದುರು ಗೆಲುವು ಸಾಧಿಸಿ ಟ್ರೋಫಿ ಎತ್ತಿಹಿಡಿದಿತ್ತು. ಕೋಲ್ಕತ್ತದಲ್ಲಿ ನಡೆಯುತ್ತಿರುವ ಬಂಗಾಳ ಮತ್ತು ರೈಲ್ವೇಸ್‌  ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡದ ಎದುರು ಮಹಾರಾಷ್ಟ್ರ ಸೆಮಿಫೈನಲ್‌ ಆಡಲಿದೆ.

ವಡೋದರಲ್ಲಿ ಕೊನೆಗೊಂಡ ಇನ್ನೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ 100 ರನ್‌ಗಳ ಜಯ ಸಾಧಿಸಿತು.ಸಂಕ್ಷಿಪ್ತ ಸ್ಕೋರು: ಮುಂಬೈ ಮೊದಲ ಇನಿಂಗ್ಸ್‌ 116.3 ಓವರ್‌ಗಳಲ್ಲಿ 402 ಹಾಗೂ 38.1 ಓವರ್‌ಗಳಲ್ಲಿ 129. ಮಹಾ ರಾಷ್ಟ್ರ 84.3 ಓವರ್‌ಗಳಲ್ಲಿ 280 ಮತ್ತು ದ್ವಿತೀಯ ಇನಿಂಗ್ಸ್‌ 65.1 ಓವರ್‌ಗಳಲ್ಲಿ 252. (ಚಿರಾಗ್‌ ಖುರಾನ 17, ವಿಜಯ್‌ ಜೋಲ್‌ ಔಟಾಗದೆ 91, ಕೇದಾರ್‌ ಜಾಧವ್‌ ಔಟಾಗದೆ 120; ಜಹೀರ್‌ ಖಾನ್‌ 51ಕ್ಕೆ2). ಫಲಿತಾಂಶ: ಮಹಾರಾಷ್ಟ್ರಕ್ಕೆ 8 ವಿಕೆಟ್‌ ಜಯ.ವಡೋದರ: ಪಂಜಾಬ್‌ ಪ್ರಥಮ ಇನಿಂಗ್ಸ್‌ 81.2 ಓವರ್‌ಗಳಲ್ಲಿ 304 ಹಾಗೂ 72.2 ಓವರ್‌ಗಳಲ್ಲಿ 296. ಜಮ್ಮು ಮತ್ತು ಕಾಶ್ಮೀರ 76.4 ಓವರ್‌ಗಳಲ್ಲಿ 277 ಹಾಗೂ 64.2 ಓವರ್‌ಗಳಲ್ಲಿ 223. (ಹರ್‌ದೀಪ್‌ ಸಿಂಗ್‌ 76, ಇಯಾನ್‌ ದೇವ್‌ ಸಿಂಗ್‌ 18, ಪರ್ವೇಜ್‌ ರಸೂಲ್‌ 10; ಸಂದೀಪ್‌ ಶರ್ಮ 63ಕ್ಕೆ1, ಮನ್‌ಪ್ರೀತ್ ಗೋನಿ 43ಕ್ಕೆ3, ವಿಕ್ರಮ್‌ ಸಿಂಗ್‌ 43ಕ್ಕೆ5, ಹರಭಜನ್‌ ಸಿಂಗ್‌ 36ಕ್ಕೆ1). ಫಲಿತಾಂಶ: ಪಂಜಾಬ್‌ಗೆ 100 ರನ್‌ ಗೆಲುವು ಹಾಗೂ ಸೆಮಿಫೈನಲ್‌ ಪ್ರವೇಶ.ಕೋಲ್ಕತ್ತ: ಬಂಗಾಳ ಮೊದಲ ಇನಿಂಗ್ಸ್‌ 101.5 ಓವರ್‌ಗಳಲ್ಲಿ 317 ಹಾಗೂ 90.4 ಓವರ್‌ಗಳಲ್ಲಿ 267. ರೈಲ್ವೇಸ್‌ 93.3 ಓವರ್‌ಗಳಲ್ಲಿ 267 ಮತ್ತು ಎರಡನೇ ಇನಿಂಗ್ಸ್‌ 43  ಓವರ್‌ಗಳಲ್ಲಿ 3 ವಿಕೆಟ್‌ಗೆ 117. (ಅಮಿತ್‌ ಪೌಣಿಕರ್‌ 41, ಮುರಳಿ ಕಾರ್ತಿಕ್‌ 56, ಅರ್ನಿಂದಮ್‌ ಘೋಷ್‌ 14; ಅಶೋಕ್‌ ದಿಂಡಾ 42ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry