ರಣಜಿ: ಮುಂಬೈ ತಂಡಕ್ಕೆ ಜಹೀರ್‌ ಖಾನ್‌ ಸಾರಥ್ಯ

7

ರಣಜಿ: ಮುಂಬೈ ತಂಡಕ್ಕೆ ಜಹೀರ್‌ ಖಾನ್‌ ಸಾರಥ್ಯ

Published:
Updated:

ಮುಂಬೈ (ಪಿಟಿಐ): ಎಡಗೈ ವೇಗಿ ಜಹೀರ್‌ ಖಾನ್‌ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯಗೊಂಡಿದ್ದ ಅಭಿಷೇಕ್‌ ನಾಯರ್‌ ಚೇತರಿಸಿಕೊಂಡಿದ್ದು ಅವರು ಈ ಪಂದ್ಯದಲ್ಲಿ ಆಡಲಿದ್ದಾರೆ.ಜಹೀರ್‌ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆಡಲು ಹೋಗಿದ್ದರು. ಮುಂಬೈ ತಂಡ ಜನವರಿ 8ರಿಂದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಹಾರಾಷ್ಟ್ರ ಎದುರು ಪೈಪೋಟಿ ನಡೆಸಲಿದೆ.ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ತಂಡದಲ್ಲಿ ಐದು ಬದಲಾವಣೆ ಮಾಡಲಾಗಿದೆ. ಈ ತಂಡ ಗುರುವಾರ ಮುಕ್ತಾಯವಾದ ಕೊನೆಯ ಲೀಗ್‌ ಪಂದ್ಯದಲ್ಲಿ ಗುಜರಾತ್‌ ಎದುರು ಗೆಲುವು ಸಾಧಿಸಿತ್ತು. ಹಿಂದಿನ ಪಂದ್ಯಗಳಿಗೆ ವಾಸೀಮ್‌ ಜಾಫರ್‌ ನಾಯಕ ರಾಗಿದ್ದರು.ತಂಡ ಇಂತಿದೆ: ಜಹೀರ್‌ ಖಾನ್‌ (ನಾಯಕ), ವಾಸೀಮ್‌ ಜಾಫರ್‌, ಅಭಿಷೇಕ್‌ ನಾಯರ್, ಆದಿತ್ಯ ತಾರೆ, ಕೌಸ್ತುಬ್‌ ಪವಾರ್‌, ಸೂರ್ಯಕುಮಾರ್‌ ಯಾದವ್‌, ವಿಶಾಲ್‌ ದಾಭೋಲ್ಕರ್‌, ಜಾವೇದ್‌ ಖಾನ್‌, ಶಾರ್ದುಲ್‌ ಠಾಕೂರ್‌, ಇಕ್ಬಾಲ್‌ ಅಬ್ದುಲ್ಲಾ, ಕೆ. ಸಾಗರ್‌, ವಿನೀತ್‌ ಇಂದುಲ್ಕರ್‌, ನಿಖಿಲ್‌ ಪಾಟೀಲ್‌, ಸರ್ವೇಶ್‌ ದಾಮ್ಲೆ, ಮತ್ತು ಸೌರಭ್‌ ನೇತ್ರವಾಲ್ಕರ್. ಕೋಚ್‌: ಸುಲಕ್ಷಣ್‌ ಕುಲಕರ್ಣಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry