ಸೋಮವಾರ, ಜನವರಿ 20, 2020
19 °C

ರಣಜಿ: ಸೆಮಿಫೈನಲ್ ತಲುಪಿದ ಮುಂಬೈ, ತಮಿಳುನಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್/ಪಿಟಿಐ): ಮುಂಬೈ, ತಮಿಳುನಾಡು, ಹರಿಯಾಣ ಹಾಗೂ ರಾಜಸ್ತಾನ ತಂಡಗಳು ಈ ಋತುವಿನ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ.ಇಂದೋರ್‌ನಲ್ಲಿ ಕೊನೆಗೊಂಡ ಮಧ್ಯ ಪ್ರದೇಶ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಮುಂಬೈ ಡ್ರಾ ಮಾಡಿಕೊಂಡಿತು. ಈ ತಂಡ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಇದರಿಂದ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು. ಈ ಮೂಲಕ 40ನೇ ಸಲ `ರಣಜಿ ರಾಜ~ ನಾಗುವ ಕನಸಿಗೆ ಸಮೀಪ ಈ ತಂಡ ಹೆಜ್ಜೆಹಾಕಿದೆ.ಮಧ್ಯ ಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ 103 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 474 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ವಾಸೀಂ ಜಾಫರ್ ನೇತೃತ್ವದ ಮುಂಬೈ ದ್ವಿತೀಯ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ113 ರನ್ ಗಳಿಸಿತು. ಈ ಮೂಲಕ ನಾಲ್ಕು ದಿನಗಳ ಆಟಕ್ಕೆ ತೆರೆ ಬಿದ್ದಿತು.ಬೆಂಗಳೂರಿನಲ್ಲಿ ಬುಧವಾರ ಕೊನೆಗೊಂಡ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಆರು ವಿಕೆಟ್‌ಗಳ ಜಯ ಪಡೆದ ಹರಿಯಾಣ ಸಹ ನಾಲ್ಕರ ಘಟ್ಟ ಪ್ರವೇಶಿಸಿದೆ.ಸಂಕ್ಷಿಪ್ತ ಸ್ಕೋರು: ಮಧ್ಯ ಪ್ರದೇಶ: 55.1 ಓವರ್‌ಗಳಲ್ಲಿ 192 ಮತ್ತು ಎರಡನೇ ಇನಿಂಗ್ಸ್ 103 ಓವರ್‌ಗಳಲ್ಲಿ 3 ವಿಕೆಟ್‌ಗೆ 474 ಡಿಕ್ಲೇರ್ಡ್. (ಮೋನಿಶ್ ಮಿಶ್ರಾ ಔಟಾಗದೇ 174, ದೇವೀಂದ್ರ ಬುಂದೆಲಾ ಔಟಾಗದೇ 101; ರಮೇಶ್ ಪವಾರ್ 88ಕ್ಕೆ1, ಸೂರ್ಯ ಕುಮಾರ್ ಯಾದವ್ 20ಕ್ಕೆ1). ಮುಂಬೈ: 146.4 ಓವರ್‌ಗಳಲ್ಲಿ 434 ಹಾಗೂ ದ್ವಿತೀಯ ಇನಿಂಗ್ಸ್ 34 ಓವರ್‌ಗಳಲ್ಲಿ 1 ವಿಕೆಟ್‌ಗೆ 113. (ಪ್ರಫುಲ್ ವಾಘೇಲಾ ಔಟಾಗದೇ 51, ಕೌಸ್ತುಬ್ ಪವಾರ್ ಔಟಾಗದೇ 52). ಫಲಿತಾಂಶ: ಡ್ರಾ, ಮುಂಬೈಗೆ ಇನಿಂಗ್ಸ್ ಮುನ್ನಡೆ ಹಾಗೂ ಸೆಮಿಫೈನಲ್ ಪ್ರವೇಶ.ಮಹಾರಾಷ್ಟ್ರ: 93 ಓವರ್‌ಗಳಲ್ಲಿ 232 ಹಾಗೂ ಎರಡನೇ ಇನಿಂಗ್ಸ್ 95 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 321 (ಚಿರಾಗ್ ಖುರಾನಾ 102, ಕೇದಾರ್ ಜಾಧವ್ 69; ಸನ್ನಿ ಗುಪ್ತಾ69ಕ್ಕೆ2). ತಮಿಳುನಾಡು: 143.2ಓವರ್‌ಗಳಲ್ಲಿ 415 ಹಾಗೂ ದ್ವಿತೀಯ ಇನಿಂಗ್ಸ್ 14 ಓವರ್‌ಗಳಲ್ಲಿ 1 ವಿಕೆಟ್‌ಗೆ 45. (ಮುರಳಿ ವಿಜಯ್  9, ಅಭಿನವ್ ಮುಕುಂದ್ ಔಟಾಗದೇ 21, ಸನ್ನಿ ಗುಪ್ತಾ ಔಟಾಗದೇ 13; ಚಿರಾಗ್ ಖುರಾನಾ 14ಕ್ಕೆ1). ಫಲಿತಾಂಶ: ಡ್ರಾ, ತಮಿಳುನಾಡಿಗೆ ಇನಿಂಗ್ಸ್ ಮುನ್ನಡೆ ನಾಲ್ಕರ ಘಟ್ಟಕ್ಕೆ ಲಗ್ಗೆ.ರಾಜಸ್ತಾನ: 167.1 ಓವರ್‌ಗಳಲ್ಲಿ 421 ಹಾಗೂ ಎರಡನೇ ಇನಿಂಗ್ಸ್ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 25. (ಆಕಾಶ್ ಚೋಪ್ರಾ ಔಟಾಗದೇ 8, ವಿನೀತ್ ಸೆಕ್ಸೆನಾ ಔಟಾಗದೇ 16). ಹೈದರಾಬಾದ್: 55 ಓವರ್‌ಗಳಲ್ಲಿ 144 ಹಾಗೂ ದ್ವಿತೀಯ ಇನಿಂಗ್ಸ್ 98 ಓವರ್‌ಗಳಲ್ಲಿ 2 ವಿಕೆಟ್‌ಗೆ 431. (ಅಕ್ಷತ್ ರೆಡ್ಡಿ 151, ರವಿ ತೇಜ ಔಟಾಗದೇ 185, ತಿರುಮಲಶೆಟ್ಟಿ ಸುಮನ್59; ಪಂಕಜ್ ಸಿಂಗ್ 113ಕ್ಕೆ1) ಫಲಿತಾಂಶ: ಡ್ರಾ, ರಾಜಸ್ತಾನಕ್ಕೆ ಮೊದಲ ಇನಿಂಗ್ಸ್ ಮುನ್ನಡೆ. ಸೆಮಿಫೈನಲ್ ಪ್ರವೇಶ.ಸೆಮಿಫೈನಲ್ ವೇಳಾಪಟ್ಟಿ: ಹರಿಯಾಣ-ರಾಜಸ್ತಾನ (ರೋಹ್‌ತಕ್, ಜನವರಿ 10ರಿಂದ 13ರ ವರೆಗೆ); ಮುಂಬೈ-ತಮಿಳುನಾಡು (ಮುಂಬೈ, ಜನವರಿ 10ರಿಂದ 13ರ ವರೆಗೆ).

ಪ್ರತಿಕ್ರಿಯಿಸಿ (+)