ರಣಬೀರ್‌ಗೆ ಶಸ್ತ್ರಚಿಕಿತ್ಸೆ

7

ರಣಬೀರ್‌ಗೆ ಶಸ್ತ್ರಚಿಕಿತ್ಸೆ

Published:
Updated:
ರಣಬೀರ್‌ಗೆ ಶಸ್ತ್ರಚಿಕಿತ್ಸೆ

ಕಳೆದ ವಾರವಷ್ಟೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದು ಖುಷಿಯಾಗಿದ್ದ ರಣಬೀರ್ ಕಪೂರ್ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾದ ಸುದ್ದಿ ಬಂದಿದೆ.ಇಮ್ತಿಯಾಜ್ ಅಲಿ ಅವರ `ರಾಕ್‌ಸ್ಟಾರ್~ ಚಿತ್ರದ ನಟನೆಗಾಗಿ ರಣಬೀರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು. ಅದಾದ ಎರಡು ದಿನಕ್ಕೆ ಬೆನ್ನಿನಲ್ಲಿ ಇದ್ದ ಗಡ್ಡೆಯನ್ನು ಹೊರತೆಗೆಸಿಕೊಂಡಿರುವ ರಣಬೀರ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

 

`ಆ ಗಡ್ಡೆ ಅಪಾಯಕಾರಿ ಏನಲ್ಲ. ಆದರೂ ಮುಂದೆ ಅದರಿಂದ ತೊಂದರೆಯಾಗಬಹುದು ಎಂದು ವೈದ್ಯರು ಹೇಳಿದ ಕಾರಣ ಅದನ್ನು ತೆಗೆಸುವ ನಿರ್ಧಾರ ಮಾಡಿದೆವು. ಇದೊಂದು ಸಣ್ಣ ಶಸ್ತ್ರ ಚಿಕಿತ್ಸೆ. ಎರಡು ಮೂರು ಗಂಟೆಯಲ್ಲಿ ಮುಗಿದು ಹೋಯಿತು~ ಎಂದು ರಣಬೀರ್ ತಂದೆ ರಿಷಿ ಕಪೂರ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry