`ರಣಬೀರ್ ನಮ್ಮಜ್ಜನ ದಾಖಲೆ ಮುರೀತಾನೆ'

7

`ರಣಬೀರ್ ನಮ್ಮಜ್ಜನ ದಾಖಲೆ ಮುರೀತಾನೆ'

Published:
Updated:

ರಣಬೀರ್ ಕಪೂರ್ ನಮ್ಮ ಕುಟುಂಬದ ಎಲ್ಲ ಫಿಲ್ಮ್‌ಫೇರ್ ದಾಖಲೆಗಳನ್ನೂ ಮುರಿಯಲಿದ್ದಾನೆ. ಆ ದಿನ ಅತ್ಯಂತ ಸಂತೋಷದ ದಿನವಾಗಲಿದೆ ಎಂದು ಕರೀನಾ ಕಪೂರ್ ಹೇಳಿದ್ದಾರೆ.ಸದ್ಯ 6 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಕರೀನಾಗೆ ತನ್ನಜ್ಜನ ದಾಖಲೆಯನ್ನು ಮುರಿಯುವ ಆಸೆಯಂತೆ. (11 ಫಿಲ್ಮ್‌ಫೇರ್ ಪ್ರಶಸ್ತಿಗಳು ರಾಜಕಪೂರ್ ಮುಡಿಗೇರಿದ್ದವು.)ತಮ್ಮಿಂದ ಇದು ಆಗದಿದ್ದರೂ ರಣಬೀರ್ ಕಪೂರ್‌ಗೆ ಇದು ಅಸಾಧ್ಯವಲ್ಲ ಎಂಬ ನಂಬಿಕೆ ಕರೀನಾರದ್ದು. ಮೊದಲೆಲ್ಲ ಕಪೂರ್ ಖಾಂದಾನ್ ಎಂದೊಡನೆ ಕೇವಲ ಕರಿಶ್ಮಾ ಮತ್ತು ಕರೀನಾ ಬಗ್ಗೆ ಮಾತ್ರ ಚರ್ಚೆಗಳಾಗುತ್ತಿದ್ದವು. ಆದರೆ ಇದೀಗ ಸಹೋದರ ರಣಬೀರ್ ಕಪೂರ್ ಇರುವುದರಿಂದ ತಮ್ಮ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದೂ ಹೇಳುತ್ತಾರೆ ಕರೀನಾ.ಕಪೂರ್ ಕುಟುಂಬದ ಕುಡಿಗಳು ಎನ್ನುವುದೇ ಒಂದು ಬಗೆಯ ಒತ್ತಡವನ್ನು ನೀಡುತ್ತದೆ. ಸಹಜವಾಗಿಯೇ ಕಪೂರ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇರಿಸಿಕೊಂಡಿರುತ್ತಾರೆ. ಆದರೆ ಅದೆಲ್ಲವನ್ನೂ ಮುಟ್ಟಲು ಸಾಧ್ಯವಾಗುತ್ತದೆಯೇ ಎಂಬ ಆತಂಕವೂ ಕಾಡುತ್ತದೆ. ಇದೀಗ ಒಂದು ದಶಕವನ್ನು ಇಂಡಸ್ಟ್ರಿಯಲ್ಲಿ ಕಳೆದ ಬಳಿಕ, ಆ ಒತ್ತಡವನ್ನು ನಿರ್ವಹಿಸುವ ಬಗೆಯನ್ನು ಕಲಿತಿದ್ದೇವೆ ಎನ್ನುತ್ತಾರೆ ಕರೀನಾ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry