ರತನ್ ಮತ್ತೆ ಯುದ್ಧ ವಿಮಾನ ಏರುವರೇ?

7

ರತನ್ ಮತ್ತೆ ಯುದ್ಧ ವಿಮಾನ ಏರುವರೇ?

Published:
Updated:
ರತನ್ ಮತ್ತೆ ಯುದ್ಧ ವಿಮಾನ ಏರುವರೇ?

ಬೆಂಗಳೂರು: ಖ್ಯಾತ ಉದ್ಯಮಿ ರತನ್ ಟಾಟಾ ಅವರು ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆಯೇ? ಎನ್ನುವ ಕುತೂಹಲದ ಪ್ರಶ್ನೆ ಯಲಹಂಕ ವಾಯುನೆಲೆಯಲ್ಲಿ ಬುಧವಾರ ಕೇಳಿಬಂದಿತು. ಪ್ರದರ್ಶನದ ಉದ್ಘಾಟನಾ ವೇದಿಕೆಯಲ್ಲಿ ಸರಿಯಾಗಿ 10 ಗಂಟೆಗೆ ಹಾಜರಾದ ಟಾಟಾ ಅವರು ಪ್ರೇಕ್ಷಕರ ಗಮನ ಸೆಳೆದರು. ಯುದ್ಧವಿಮಾನಗಳ ಹೊರತಾಗಿ ಜನರನ್ನು ಕಾಡಿದ ಪ್ರಶ್ನೆ ಎಂದರೆ ‘ಈ ಬಾರಿಯೂ ಟಾಟಾ ಎಫ್- 16 ಯುದ್ಧವಿಮಾನ ಹಾರಿಸುವರೇ?’ ಎನ್ನುವುದಾಗಿತ್ತು.ಉತ್ತರ ಪಡೆಯಲು ಮಾಧ್ಯಮಗಳು ಹಲವು ಬಾರಿ ಪ್ರಯತ್ನಿಸಿದರೂ ಟಾಟಾ ಅವರು ಪ್ರತಿಬಾರಿಯೂ  ನುಣುಚಿಕೊಂಡರು. ಕಳೆದ ಬಾರಿ ನಡೆದ ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಟಾಟಾ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನವನ್ನು ಹಾರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry