ರಥೋತ್ಸವಕ್ಕೆ ಮೆರಗು ನೀಡಿದ ಜನಪದ ಕಲೆ

7

ರಥೋತ್ಸವಕ್ಕೆ ಮೆರಗು ನೀಡಿದ ಜನಪದ ಕಲೆ

Published:
Updated:

ಹಳೇಬೀಡು:  ಗ್ರಾಮೀಣ ಸೊಗಡಿನ ಜನಪದ ಕಲೆಗಳ ಅನಾವರಣ ದೊಂದಿಗೆ, ಕಿವಿಗೆ ಇಂಪು ನೀಡುವ ಮಂಗಳ ವಾದ್ಯ, ಡೊಳ್ಳಿನ ಸದ್ದು, ವಿವಿಧ ವೇಷಧಾರಿಗಳ ಕುಣಿತ ಮೈಮನ ರೋಮಾಂಚನಗೊಳಿಸಿದವು.ಹಳೇಬೀಡಿನಲ್ಲಿ ಸೋಮವಾರ ನಡೆದ ಹೊಯ್ಸಳ ರಥೋತ್ಸವದ ಮೆರವಣಿಗೆ ಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿವಿಧ ಜಾನಪದ ಕಾರ್ಯಕ್ರಮಗಳು ಜನರ ಮನ ತಣಿಸಿದವು.ವೀರಗಾಸೆಯ ಪ್ರದರ್ಶನದಲ್ಲಿ ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕುತ್ತ ಸಾಗಿದ ಎತ್ತರವಾದ ನಂದಿ ಆಕರ್ಷಿಸಿತು. ರಾಜಗೆರೆ ಶಿವಣ್ಣ ಅವರ ಕರಗ ನೃತ್ಯ, ದ್ಯಾವಪ್ಪನಹಳ್ಳಿಯ ಸೋಮನ ಕುಣಿತ, ಅಜ್ಜಂಪುರದ ಕನಕ ತಂಡದ ಡೊಳ್ಳು ಕುಣಿತ,  ಹುಲಿಕೆರೆ ಅಂಬೇಡ್ಕರ್ ತಂಡದ ಮರಗಾಲು ಕುಣಿತ ಹಾಗೂ ಪೂಜಾ ಕುಣಿತ ಜನರಿಗೆ ಮುದ ನೀಡಿದವು. ಹುಲಿಕೆರೆಯ ಚಂದ್ರಯ್ಯ      ತಂಡದ ಹುಲಿವೇಷ ಮನೋರಂಜನೆ ನೀಡಿತು. ಜನರು ಭಕ್ತಿ  ಭಾವದೊಂದಿಗೆ ಧಾರ್ಮಿಕ ಕಾರ್ಯಕ್ರಮ ವೀಕ್ಷಿಸಿದರು.`ಅಂಗವಿಕಲರಿಗೆ ಸಮಾನ ಅವಕಾಶ ನೀಡಿ'

ಜಾವಗಲ್: ಅಂಗವಿಕಲ ಬಗ್ಗೆ ಅನುಕಂಪ ತೋರದೇ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂದು ಮುಖ್ಯ ಶಿಕ್ಷಕ ಶಿವಲಿಂಗ ಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಇಲಾಖೆ ನೀಡುವ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.ಅಂಗವಿಕಲರನ್ನು ಪ್ರೀತಿಯಿಂದ, ಗೌರವದಿಂದ ಕಾಣಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಒದಗಿಸಿ ಕೊಡ ಬೇಕು. ಕೀಳರಿಮೆ ದೂರ ಮಾಡಬೇಕೆಂದು ಸಲಹೆ ನೀಡಿದರು.ಅಂಗವಿಕಲ ವಿದ್ಯಾರ್ಥಿ ಹೇಮ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಶಿಕ್ಷಕ ಶಿವಣ್ಣ, ಶಿಕ್ಷಕ ಸುರೇಶ್ ಮತನಾಡಿದರು. ಶಿಕ್ಷಕರಾದ ಹಾಲಪ್ಪ, ಸರಸ್ವತಿ, ಪಲ್ಲವಿ ಛಾಯಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry