ರಥೋತ್ಸವ: ರೈಲು ಪ್ರಯಾಣಿಕರ ಪರದಾಟ

7

ರಥೋತ್ಸವ: ರೈಲು ಪ್ರಯಾಣಿಕರ ಪರದಾಟ

Published:
Updated:

ಚಿಕ್ಕಬಳ್ಳಾಪುರ:  ಶಿವರಾತ್ರಿ ಆಚರಣೆ ಮತ್ತು ಭೋಗನಂದೀಶ್ವರ ಬ್ರಹ್ಮ ರಥೋತ್ಸವಕ್ಕೆ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ರೈಲಿನಲ್ಲಿ ಸ್ಥಳಾವಕಾಶ ಸಿಗದೇ ಪರದಾಡಿದ ಘಟನೆ ತಾಲ್ಲೂಕಿನ ನಂದಿ ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆಯಿತು. ರೈಲಿನಲ್ಲಿ ಸ್ಥಳಾವಕಾಶ ಸಿಗದೇ ಸಹಸ್ರಾರು ಪ್ರಯಾಣಿಕರು ಪರದಾಡಬೇಕಾಯಿತು.ಚಿಕ್ಕಬಳ್ಳಾಪುರದಿಂದ ಧರ್ಮಪುರಿಗೆ ಹೋಗುವ ರೈಲು ಹತ್ತಲು ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ನಂದಿ ರೈಲು ನಿಲ್ದಾಣದಲ್ಲಿ ನೆರೆದಿದ್ದರು. ನಿಲ್ದಾಣದಲ್ಲಿ ರೈಲು ಎರಡೇ ನಿಮಿಷ ನಿಲ್ಲುವ ಕಾರಣ ಪ್ರಯಾಣಿಕರು ಅವಸರದಲ್ಲಿ ರೈಲಿನತ್ತ ನುಗ್ಗಿದರು.ಕೈಯಲ್ಲಿ ಹಲವು ವಸ್ತುಗಳಿದ್ದ ಕಾರಣ ಬಹುತೇಕ ಮಂದಿಗೆ ಒಳಪ್ರವೇಶಿಸಲು ಸಾಧ್ಯವಾಗಲಿಲ್ಲ. ಎರಡೇ ನಿಮಿಷದಲ್ಲಿ ರೈಲು ಪ್ರಯಾಣ ಮುಂದುವರೆಸಿದಾಗ, ಪ್ರಯಾ ಣಿಕರ ಕೈಯಲ್ಲಿದ್ದ ಚೀಲಗಳು ಮತ್ತು ಮೂಟೆಗಳು ಚೆಲ್ಲಾಪಿಲ್ಲಿ ಯಾದವು.ನೂಕುನುಗ್ಗಾಟ ನಡೆಯುತ್ತಿರುವುದು ಕಂಡ ಕೂಡಲೇ ರೈಲನ್ನು ಮತ್ತೆ ನಿಲ್ಲಿಸ ಲಾಯಿತು. ನಿಲ್ದಾಣದಲ್ಲಿದ್ದ ಎಲ್ಲ ಪ್ರಯಾ ಣಿಕರು ರೈಲಿನಲ್ಲಿ ಹತ್ತಲು ಸುಮಾರು ಹದಿನೈದು ನಿಮಿಷಗಳು ಬೇಕಾದವು. ಸ್ಥಳ ದಲ್ಲಿದ್ದ ರೈಲ್ವೆ ಪೊಲೀಸರು ಪ್ರಯಾ ಣಿಕರನ್ನು ರೈಲಿಗೆ ಹತ್ತಿಸಲು ನೆರವಾದರು.`ಶಿವರಾತ್ರಿ ಮತ್ತು ಭೋಗನಂದೀಶ್ವರ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳಲು ಧರ್ಮಪುರಿ ಸೇರಿದಂತೆ ಬೇರೆ ಬೇರೆ ಊರುಗಳಿಂದ ತುಂಬ ಜನರು ಬರು ತ್ತಾರೆ. ಇದಕ್ಕೆಂದೇ ಪ್ರತಿ ವರ್ಷ ಹೆಚ್ಚು ವರಿ ರೈಲು ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ  ಈ ಬಾರಿ ಹೆಚ್ಚುವರಿ ರೈಲು ಸೌಲಭ್ಯ ಇಲ್ಲದ ಕಾರಣ ಇಷ್ಟೆಲ್ಲ ಪರ ದಾಡಬೇಕಾಯಿತು. ಮುಂದಿನ ವರ್ಷ ವಾದರೂ ರೈಲ್ವೆ ಇಲಾಖೆಯವರು ಈ ಸಮಸ್ಯೆಯನ್ನು ಬಗೆಹರಿಸಲಿ. ಹೆಚ್ಚುವರಿ ರೈಲು ಸೌಲಭ್ಯ ಕಲ್ಪಿಸಲಿ~ ಎಂದು ಪ್ರಯಾ ಣಿಕರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry