ರನೌಟ್ ನಿರ್ಣಾಯಕ ಪಾತ್ರ ವಹಿಸಿತು: ರವೀಂದ್ರ ಜಡೇಜ

7

ರನೌಟ್ ನಿರ್ಣಾಯಕ ಪಾತ್ರ ವಹಿಸಿತು: ರವೀಂದ್ರ ಜಡೇಜ

Published:
Updated:

ಮೆಲ್ಬರ್ನ್: ನಾಲ್ಕು ರನೌಟ್‌ಗಳು ಮತ್ತು ಎದುರಾಳಿ ತಂಡದ ಎರಡು ವಿಕೆಟ್‌ಗಳನ್ನು ಬೇಗನೇ ಪಡೆಯಲು ಸಾಧ್ಯವಾದದ್ದು ಭಾರತ ತಂಡದ ಗೆಲುವಿಗೆ ಕಾರಣ ಎಂದು ರವೀಂದ್ರ ಜಡೇಜ ಅಭಿಪ್ರಾಯಪಟ್ಟಿದ್ದಾರೆ.`ಮೊದಲೇ ಎರಡು ವಿಕೆಟ್‌ಗಳು ದೊರೆತ ಕಾರಣ ನಮಗೆ ಎದುರಾಳಿಗಳ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು. ಜೊತೆಗೆ ಆ್ಯರನ್ ಫಿಂಚ್ ಹಾಗೂ ಜಾರ್ಜ್ ಬೈಲಿ ಅವರನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾದೆವು. ಇದರಿಂದ ಆಸೀಸ್ ಆರಂಭದಲ್ಲೇ ಹಿನ್ನಡೆ ಅನುಭವಿಸಿತು~ ಎಂದು ಪಂದ್ಯದ ಬಳಿಕ ನುಡಿದರು.ಆಲ್‌ರೌಂಡರ್ ಜಡೇಜ ಮೂರು ಓವರ್‌ಗಳಲ್ಲಿ ಕೇವಲ 16 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದಿದ್ದರು. ಮಾತ್ರವಲ್ಲ ಫಿಂಚ್ ಹಾಗೂ ಬೈಲಿ ಅವರನ್ನು ರನೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry