ರನ್ನನ ಕಾವ್ಯ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಶೀಘ್ರ

7

ರನ್ನನ ಕಾವ್ಯ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಶೀಘ್ರ

Published:
Updated:

ಮುಧೋಳ:  ರನ್ನನ ಕಾವ್ಯಗಳಲ್ಲಿ ವ್ಯಕ್ತಿತ್ವ ವಿಕಸನದ ಅಂಶಗಳು ಅಡಗಿವೆ. ಕವಿ ಹಾಗೂ ಕಾವ್ಯಗಳನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಇಲಾಖೆಯಿಂದ ನಡೆದಿದೆ, ಶೀಘ್ರದಲ್ಲಿ ಎಲ್ಲ ಭಾಷೆಗಳಲ್ಲಿ ಅನುವಾದ ಮಾಡುವ ಕೆಲಸ ನಡೆಯಲಿದೆ. ರನ್ನ ವೈಭವ-2012ಕ್ಕೆ ರೂ 40 ಲಕ್ಷ ಮೀಸಲಿಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಸಣ್ಣ ನೀರಾವರಿ  ಸಚಿವ ಗೋವಿಂದ ಕಾರಜೋಳ ತಿಳಿಸಿದರು.ಇಲ್ಲಿಯ ರನ್ನ ಗ್ರಂಥಾಲಯದಲ್ಲಿ ಭಾನುವಾರ ರನ್ನ ಪ್ರತಿಷ್ಠಾನ ಆಯೋಜಿಸಿದ್ದ ಕವಿ ಕಾವ್ಯ ಅನ್ವೇಷಣೆ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಕನ್ನಡ ನಾಡು, ನುಡಿಯ ಅಭಿವೃದ್ಧಿಗೆ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.ರನ್ನನ ಸಾಹಿತ್ಯ ಕೃತಿಗಳ ಮರು ಮುದ್ರಣಕ್ಕೆ ಪ್ರಯತ್ನಿಸಲಾಗುವುದು. ಪೇಶ್ವೆ ಕಾಲದಿಂದ ಇಲ್ಲಿಯವರಿಗೆ ಮೋಡಿ ಲಿಪಿ ಶಾಸನಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿಯವರನ್ನು ಹಂಪಿ ವಿಶ್ವ ವಿದ್ಯಾಲಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ಕಸಬಾ ಜಂಬಗಿ ಹಿರೇಮಠದ ರುದ್ರಮುನಿಶಿವಾಚಾರ್ಯ ಶ್ರಿಗಳು ಮಾತನಾಡಿ,  ಸಚಿವ ಕಾರಜೋಳರು ಸಚಿವರಾದ ನಂತರ ಕನ್ನಡ ನಾಡು-ನುಡಿಗೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿ, ಸರ್ಕಾರ ರನ್ನ ಪ್ರಶಸ್ತಿಯನ್ನು ಸಾರಸ್ವತ ಲೋಕದಲ್ಲಿ ಗಣನೀಯ ಸೇವೆ ಸಲ್ಲಿಸಿದ, ರಾಷ್ಟ್ರ ಮಟ್ಟದ ಅಥವಾ ರಾಜ್ಯಮಟ್ಟದ ಸಾಧಕರಿಗೆ ನೀಡಬೇಕು.

ಕವಿ  ಚಕ್ರವರ್ತಿ ರನ್ನನ ಕಾವ್ಯಗಳಲ್ಲಿ ಯುವಕರಿಗೆ ವ್ಯಕ್ತಿತ್ವ ವಿಕಸನವಾಗುವ ಶ್ಲೋಕಗಳು ಇರುವು ದರಿಂದ ಅಂಥವುಗಳನ್ನು ಆಯ್ದು ಬೇರೆ ಪುಸ್ತಕವನ್ನು ಹೊರತರಬೇಕು, ರನ್ನ ವಸ್ತು ಸಂಗ್ರಹಾಲಯ, ರನ್ನನ ಕುರಿತು ಅಧ್ಯಯನಕ್ಕಾಗಿ ಅನುಕೂಲತೆ ಸೇರಿದಂತೆ ಮುಧೋಳದಲ್ಲಿ ಮಾತ್ರವಲ್ಲದ ಜಿಲ್ಲಾ ಕೆಂದ್ರಗಳಲ್ಲಿ ಕೂಡಾ ರನ್ನನ ಕಾವ್ಯಗಳನ್ನು ಪರಿಚಯಿಸುವ ಕೆಲಸ ನಡೆಯಬೇಕಿದೆ ಎಂದರು.ರನ್ನ ಮತ್ತು ಬಂಧು ವರ್ಮರ ಕುರಿತು ಮೈಸೂರಿನ ಪ್ರೊ. ಶುಭಚಂದ್ರ ಹಾಗೂ ಸಾಹಸ ಭೀಮ ವಿಜಯ ಕುರಿತು ಡಾ.ಎಸ್.ಪಿ. ಪದ್ಮಪ್ರಸಾದ ಉಪನ್ಯಾಸ ನೀಡಿದರು. ರನ್ನ ಪ್ರತಿಷ್ಠಾನದ ಸದಸ್ಯ ವೈ.ಎಚ್. ಕಾತರಕಿ, ಬಿ.ಪಿ. ಹಿರೇಸೋಮಣ್ಣವರ, ಎಸ್.ಬಿ. ಕೃಷ್ಣಗೌಡರ, ಸಾಹಿತಿಗಳಾದ ಡಾ. ಬಾಳಾಸಾಹೇಬ ಲೋಕಾಪುರ, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ ಸ್ವಾಗತಿಸಿದರು. ರನ್ನ ಪ್ರತಿಷ್ಠಾನ ಸದಸ್ಯ ಬಿ.ಪಿ. ಹಿರೇಸೋಮಣ್ಣವರ ಪ್ರಾಸ್ತವಿಕ ವಾಗಿ ಮಾತನಾಡಿದರು. ಶಶಿಕಲಾ ಗದಿಗೆಪ್ಪಗೌಡರ ನಿರೂಪಿಸಿದರು. ಎಸ್.ಬಿ. ಕೃಷ್ಣೇಗೌಡರ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry