ರನ್ನನ ಕೊಡುಗೆ ಅಪಾರ: ಶೆಟ್ಟರ್

7

ರನ್ನನ ಕೊಡುಗೆ ಅಪಾರ: ಶೆಟ್ಟರ್

Published:
Updated:
ರನ್ನನ ಕೊಡುಗೆ ಅಪಾರ: ಶೆಟ್ಟರ್

ಬಾಗಲಕೋಟೆ: `ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕವಿ ಚಕ್ರವರ್ತಿ ರನ್ನನ ಕೊಡುಗೆ ಅಪಾರ, ರನ್ನನ ಕಾಲದಲ್ಲಿ ಕನ್ನಡ ಕಾವ್ಯ ಕ್ಷೇತ್ರ ಸುವರ್ಣಯುಗ ವಾಗಿತ್ತು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶ್ಲಾಘಿಸಿದರು.ಮುಧೋಳ ಪಟ್ಟಣದ ರನ್ನ ಕ್ರೀಡಾಂಗಣದಲ್ಲಿ ರನ್ನ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಹಮ್ಮಿಕೊಂಡಿ ರುವ ಮೂರು ದಿನಗಳ ರನ್ನ ವೈಭವ ಸಾಂಸ್ಕೃತಿಕ ಉತ್ಸವಕ್ಕೆ ಸೋಮವಾರ ಸಂಜೆ ಚಾಲನೆ ನೀಡಿದ ಅವರು ಮಾತನಾಡಿದರು.ಇತಿಹಾಸ ಮತ್ತು ಪುರಾಣವನ್ನು ಸಮೀಕರಿಸಿ ಕೊಂಡು ಕವಿ ರನ್ನ ರಚಿಸಿದ  `ಗದಾಯುದ್ಧ' ಕೃತಿಯು ಮಾನವೀಯ ಸಂದೇಶ ಒಳಗೊಂಡಿದೆ. ಮುಧೋಳ ದಲ್ಲಿ ರನ್ನ ಜನಿಸಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ ಎಂದರು.`ರನ್ನ ಪ್ರತಿಷ್ಠಾನಕ್ಕೆ ರಾಜ್ಯ ಸರ್ಕಾರ ಹೊಸ ಆಯಾಮ ನೀಡಿದೆ. ಪ್ರತೀ ವರ್ಷ ರನ್ನ ವೈಭವ ನಡೆಸುವ ಮೂಲಕ ರನ್ನನ ತತ್ವಾದರ್ಶ ಮತ್ತು ಸಾಹಿತ್ಯವನ್ನು ನಾಡಿನ ಜನತೆಗೆ ಉಣಬಡಿಸಲಾಗು ತ್ತಿದೆ' ಎಂದು ತಿಳಿಸಿದರು.ಹಿರೇಮಠದ ರುದ್ರಮುನಿ ಶಿವಾ ಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಜಾಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.ಡಾ.ನಂಜುಂಡಪ್ಪ ವರದಿ ಶಿಫಾರಸಿ ನಂತೆ ನಿರ್ಲಕ್ಷಿತ ಮತ್ತು ಹಿಂದುಳಿದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಲಾಗಿದೆ. ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದು ಹೇಳಿದರು.ಸಚಿವ ಮುರುಗೇಶ ನಿರಾಣಿ `ಧವಳ' ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ ಕವಿಚಕ್ರವರ್ತಿ ರನ್ನ ಮೂರ್ತಿ ಅನಾವರಣಗೊಳಿಸಿದರು.  ಸಂಸದ ಪಿ.ಸಿ. ಗದ್ದಿಗೌಡರ ಅವರು ಕೈಮಗ್ಗ ಸಾಮಗ್ರಿ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟಿಸಿದರು. ಶಾಸಕ ವೀರಣ್ಣ ಚರಂತಿಮಠ ಅವರು ಮೋಡಿಲಿಪಿ ಗಣಕೀರಣ ಮತ್ತು ಕನ್ನಡೀಕರಣದ ಸಾಫ್ಟವೇರ್ ಬಿಡುಗಡೆ ಮಾಡಿದರು.ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಭೂಷಣ್ಣವರ, ಎಂಎಲ್‌ಸಿ ಜಿ.ಎಸ್.ನ್ಯಾಮಗೌಡ, ಮುಧೋಳ ತಾ.ಪಂ. ಅಧ್ಯಕ್ಷ ಸದಾಶಿವ ಸಂಕ್ರಟ್ಟಿ, ಪುರಸಭೆ ಅಧ್ಯಕ್ಷ ಸೈದು ಭೋವಿ, ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಜಿ.ಎಸ್.ಗೊಂಬಿ, ಜಿ.ಪಂ. ಸದಸ್ಯ ಮಹಾಂತೇಶ ಹಿಟ್ಟಿನಮಠ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಈಶ್ವರಚಂದ್ರ ವಿದ್ಯಾ ಸಾಗರ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ, ತಹಶೀಲ್ದಾರ ಶಂಕರಗೌಡ ಸೋಮನಾಳ, ಜಮಖಂಡಿ ಉಪ ವಿಭಾಗಾಧಿಕಾರಿ ಅಶೋಕ ದುಡಗುಂಟಿ, ಸಿಇಒ ಡಾ.ವಿ.ಕೆ.ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry