ರನ್ನ ಉತ್ಸವ ನ.26ರಿಂದ: ಕಾರಜೋಳ

7

ರನ್ನ ಉತ್ಸವ ನ.26ರಿಂದ: ಕಾರಜೋಳ

Published:
Updated:

ಬಾಗಲಕೋಟೆ: ಮುಧೋಳದಲ್ಲಿ ನವೆಂಬರ್ 26 ರಿಂದ ಮೂರು ದಿನಗಳ ಕಾಲ ರನ್ನ ಉತ್ಸವವನ್ನು ವೈಭಯು ವಾಗಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ರನ್ನ ವೈಭವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ಉತ್ಸವವನ್ನು ಕಳೆದ ವರ್ಷಕಿಂತ ಹೆಚ್ಚು ಅದ್ದೂರಿಯಾಗಿ ಆಚರಿಸಲು ಸಮಿತಿ ಮುಂದಾಗಿದೆ ಎಂದರು. ನ. 26 ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಉತ್ಸವ ಉದ್ಘಾಟಿಸಲಿದ್ದಾರೆ. ಶ್ರವಣ ಬೆಳಗೋಳದ ಚಾರುಕೀರ್ತಿ ಭಟ್ಟಾಚಾರ್ಯ ಸ್ವಾಮಿಜಿ ಸಾನ್ನಿಧ್ಯ ವಹಿಸುವರು. ಉದ್ಘಾಟನೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರಿಗೆ ಭಾಗವಹಿಸುವಂತೆ ವಿನಂತಿಸಲಾಗಿದೆ ಎಂದು ಹೇಳಿದರು.  ರನ್ನ ಸ್ಮಾರಕ ಭವನವನ್ನು ಸಹ ಅಂದೇ ಉದ್ಘಾಟಿಸಲಾಗುವುದು. ರಾಜ್ಯ ಮಟ್ಟದ ನೃತ್ಯ, ಸಂಗೀತ, ಯಕ್ಷಗಾನ, ಜಾನಪದ ಹಾಗೂ ನಾಟಕ ಕಾರ್ಯಕ್ರಮಗಳನ್ನು ಖ್ಯಾತ ಕಲಾವಿದರಿಂದ ಪ್ರದರ್ಶಿಸಲು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿಯ ಅಧ್ಯಕ್ಷರ ಜೊತೆ ಈ ಕುರಿತು ಚರ್ಚಿಸಲಾಗಿದೆ. ಭಾರತೀಯ ವಾಯು ಸೇನೆ ಹಾಗೂ ಭೂ ಸೇನೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಸೇನೆ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ.ರನ್ನ ರಥೋತ್ಸವ ಹಾಗೂ ಮೆರವಣಿಗೆಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸ ಲಾಗುವುದು. ಉತ್ತರ ಕರ್ನಾಟಕದ ಜಾನಪದ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ದೂರದರ್ಶನದಲ್ಲಿ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುವುದು. ಉತ್ಸವವು ಅದ್ದೂರಿಯಾಗಿ ಹಾಗೂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 12 ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರದಿಂದ ರೂ. 40 ಲಕ್ಷ ಅನುದಾನ ನೀಡಲಾಗುವುದು ಎಂದರು. ಶಾಸಕರಾದ ವೀರಣ್ಣ ಚರಂತಿಮಠ, ರುದ್ರಾಮುನಿ ಶಿವಾಚಾರ್ಯ ಸ್ವಾಮಿ, ಮುಧೋಳ ಹಾಗೂ ಮಹಾಲಿಂಗಪುರ ಪುರಸಭೆ ಅಧ್ಯಕ್ಷರು, ಉತ್ಸವ ಸಮಿತಿಯ ಸದಸ್ಯರು, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಜಿ.ಪಾಟೀಲ, ಆರ್.ಟಿ.ಓ ಪಾಟೀಲ, ಪಿ.ಡಬ್ಲೂ.ಡಿ ಕಾರ್ಯನಿರ್ವಾಹಕ ಎಂಜಿನಿಯರ್ ವಡ್ಡರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕಂಕಣವಾಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry