ರಫ್ತು ಉತ್ತೇಜನಕ್ಕೆ ಕ್ರಮ

7

ರಫ್ತು ಉತ್ತೇಜನಕ್ಕೆ ಕ್ರಮ

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಕುಸಿತ ಕಂಡಿರುವ ರಫ್ತು ವಹಿವಾಟಿಗೆ ಉತ್ತೇಜನ ನೀಡಲು ಸರ್ಕಾರ ಶೀಘ್ರದಲ್ಲೇ ಕೆಲವು ಕ್ರಮಗಳನ್ನು ಪ್ರಕಟಿಸಲಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ ಹೇಳಿದ್ದಾರೆ.ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ ರಫ್ತು ವಹಿವಾಟು ಶೇ 5.95ರಷ್ಟು ಕುಸಿತ ಕಂಡು 189.2 ಶತಕೋಟಿ ಡಾಲರ್‌ಗಳಿಗೆ (್ಙ10.40 ಲಕ್ಷ ಕೋಟಿಗೆ) ಇಳಿದಿದೆ ಎಂದು ಅವರು ಇಲ್ಲಿ ನಡೆದ ಸರ್ಕಾರ- ಉದ್ಯಮ ಜಂಟಿ ಕ್ರಿಯಾಪಡೆಯ 5ನೇ ವಾರ್ಷಿಕ ಸಮ್ಮೇಳನದಲ್ಲಿ   ಹೇಳಿದರು.ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಿಸಲು ಬ್ಯಾಂಕುಗಳು ಕ್ರಮ ಕೈಗೊಳ್ಳಬೇಕು ಎಂದು ಉದ್ಯಮ ಮುಖಂಡರು ಸಚಿವರಿಗೆ ಮನವಿ ಮಾಡಿರು. ಇದಕ್ಕೆ ಸಂಬಂಧಿಸಿದಂತೆ ಉದ್ಯಮ ಉತ್ತೇಜನ ಮಂಡಳಿ ಸಭೆ ಶೀಘ್ರದಲ್ಲೇ ನಡೆಯಲಿದೆ ಎಂದು ಶರ್ಮಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry