ರಫ್ತು ಕುಸಿತ: ಎಫ್‌ಐಇಒ ಕಳವಳ

7

ರಫ್ತು ಕುಸಿತ: ಎಫ್‌ಐಇಒ ಕಳವಳ

Published:
Updated:
ರಫ್ತು ಕುಸಿತ: ಎಫ್‌ಐಇಒ ಕಳವಳ

ನವದೆಹಲಿ (ಪಿಟಿಐ): ಯುರೋಪ್ ಮತ್ತು ಉತ್ತರ ಅಮೆರಿಕ ಮಾರುಕಟ್ಟೆಯಿಂದ ಬೇಡಿಕೆ ತಗ್ಗಿದ ಪರಿಣಾಮ ದೇಶದ ರಫ್ತು ವಹಿವಾಟು ಆಗಸ್ಟ್‌ನಲ್ಲಿ ಶೇ 9.74ರಷ್ಟು ಕುಸಿದಿದೆ.4 ತಿಂಗಳಿಂದ ರಫ್ತು  ಇಳಿಮುಖ ವಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 36000 ಕೋಟಿ ಡಾಲರ್ (ರೂ19 ಲಕ್ಷ ಕೋಟಿ) ರಫ್ತು ವಹಿ ವಾಟು ಗುರಿ ಮುಟ್ಟುವುದು ಕಷ್ಟ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಭಾರತೀಯ ರಫ್ತುದಾರರ ಸಂಘಟನೆ (ಎಫ್‌ಐಇಒ) ಅಭಿಪ್ರಾಯಪಟ್ಟಿವೆ.ಆಗಸ್ಟ್‌ನಲ್ಲಿ 3795 ಕೋಟಿ ಡಾಲರ್ (ರೂ2ಲಕ್ಷಕೋಟಿ)  ಆಮದು ವಹಿವಾಟು ದಾಖಲಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 5.08ರಷ್ಟು ತಗ್ಗಿದೆ. ರಫ್ತು-ಆಮದು ಕುಸಿತದಿಂದ ದೇಶದ ವಿತ್ತೀಯ ಕೊರತೆ ಅಂತರ ಆಗಸ್ಟ್‌ನಲ್ಲಿ 1570 ಕೋಟಿ ಡಾಲರ್‌ಗೆ (ರೂ83ಲಕ್ಷ) ಏರಿದೆ.ಜುಲೈನಲ್ಲಿ ರಫ್ತು ಶೇ 15ರಷ್ಟು ಕುಸಿದಿತ್ತು. ಆಗಸ್ಟ್‌ನಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಎಸ್.ಆರ್. ರಾವ್ ಹೇಳಿದ್ದಾರೆ. ರಫ್ತು ಉತ್ತೇಜನಕ್ಕಾಗಿ ಸರ್ಕಾರ ಶೇ 2 ಬಡ್ಡಿ ಸಬ್ಸಿಡಿಯನ್ನು ವಿಸ್ತರಿಸಿದೆ.ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ರಫ್ತು ಶೇ 6ರಷ್ಟು ತಗ್ಗಿದ್ದು, 12700 ಕೋಟಿ ಡಾಲರ್ (ರೂ6.7 ಲಕ್ಷ ಕೋಟಿ) ವಹಿವಾಟು ನಡೆದಿದೆ.  ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಆಮದು               ಶೇ 6.2ರಷ್ಟು ಕುಸಿದಿದ್ದು, 19100 ಕೋಟಿ ಡಾಲರ್ (ರೂ10.06 ಲಕ್ಷ ಕೋಟಿ ) ವಹಿವಾಟು ದಾಖಲಾಗಿದೆ. ಈ ಅವಧಿಯಲ್ಲಿ ವಿತ್ತೀಯ ಕೊರತೆ ಅಂತರವು ರೂ3.74 ಲಕ್ಷ ಕೋಟಿಗೆ  ಏರಿಕೆಯಾಗಿದೆ. 

 

ಸಿದ್ಧ ಉಡುಪು ರಫ್ತು ಇಳಿಕೆ

ಅಮೆರಿಕ, ಯೂರೋಪ್ ಮಾರುಕಟ್ಟೆಗಳಿಂದ ಬೇಡಿಕೆ ಕುಸಿದ ಹಿನ್ನೆೆ ಯಲ್ಲಿ ದೇಶದ ಸಿದ್ಧ ಉಡುಪು ರಫ್ತು ಆಗಸ್ಟ್‌ನಲ್ಲಿ ಶೇ 7.2ರಷ್ಟು ತಗ್ಗಿದ್ದು, 98.90 ಕೋಟಿ ಡಾಲರ್ (ಅಂದಾಜು ರೂ5128 ಕೋಟಿ) ವಹಿವಾಟು ದಾಖಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ರಫ್ತು   ಶೇ 12.16ರಷ್ಟು ತಗ್ಗಿದ್ದು, 52.6 ಲಕ್ಷ ಡಾಲರ್ (ರೂ27.27 ಕೋಟಿ) ವಹಿವಾಟು ನಡೆದಿದೆ ಎಂದು ಸಿದ್ಧ ಉಡುಪು ರಫ್ತು ಉತ್ತೇಜನ ಮಂಡಳಿ (ಎಇಪಿಸಿ) ಶುಕ್ರವಾರ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry