ರಫ್ತು ವಹಿವಾಟುಹೆಚ್ಚಳ

7

ರಫ್ತು ವಹಿವಾಟುಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಪಾಶ್ಚಿಮಾತ್ಯ ದೇಶಗಳ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರೂ, ಜನವರಿ ತಿಂಗಳ ರಫ್ತು ಬೆಳವಣಿಗೆಯು  ಶೇ 10ರಷ್ಟು ಏರಿಕೆ ಕಂಡಿದೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ರಫ್ತು ವಹಿವಾಟು 25 ಶತಕೋಟಿ ಡಾಲರ್‌ಗಳಷ್ಟು (್ಙ 1,25,000 ಕೋಟಿ) ಹೆಚ್ಚಳ ಕಂಡಿದೆ.    ಡಿಸೆಂಬರ್ ತಿಂಗಳಲ್ಲಿ ರಫ್ತು ವಹಿವಾಟು ಶೇ 6.7ರಷ್ಟು ಏರಿಕೆ ಕಂಡಿತ್ತು.

ದುಬಾರಿ ಕಚ್ಚಾ ತೈಲ ಮತ್ತು ತರಕಾರಿ ಬೆಲೆಗಳಿಂದಾಗಿ ಆಮದು ಶೇ 20ರಷ್ಟು ಏರಿಕೆಯಾಗಿ 40 ಶತಕೋಟಿ ಡಾಲರ್‌ಗಳಷ್ಟಾಗಿದೆ (್ಙ 2,00,000 ಕೋಟಿ). ಇದರಿಂದ ವ್ಯಾಪಾರ ಕೊರತೆಯು 14.7 ಶತಕೋಟಿ ಡಾಲರ್‌ಗಳಷ್ಟಾಗಿದೆ (್ಙ 73,500 ಕೋಟಿ) ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ತಿಳಿಸಿದ್ದಾರೆ.

ಅಮೆರಿಕ ಮತ್ತು ಯೂರೋಪ್‌ನಲ್ಲಿನ ಹಣಕಾಸು ಬಿಕ್ಕಟ್ಟಿನ ಪರಿಸ್ಥಿತಿಯು ದೇಶದ ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ಶೇ 82ರಷ್ಟು ಏರಿಕೆ ದಾಖಲಿಸಿದ್ದ ರಫ್ತು ವಹಿವಾಟು ಆಗಸ್ಟ್ ನಂತರ ಕುಸಿಯುತ್ತಲೇ ಸಾಗಿತ್ತು.ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ ರಫ್ತು ವಹಿವಾಟು 300 ಶತಕೋಟಿ ಡಾಲರ್‌ಗಳಷ್ಟು (್ಙ15,00,000 ಕೋಟಿ) ಮತ್ತು ಆಮದು 460 ಶತಕೋಟಿ ಡಾಲರ್‌ಗಳಷ್ಟು (್ಙ23,00,000 ಕೋಟಿ) ಇರಲಿದೆ. ವ್ಯಾಪಾರ ಕೊರತೆಯ ಪ್ರಮಾಣ 160 ಶತಕೋಟಿ ಡಾಲರ್‌ಗಳಷ್ಟು (್ಙ 8,00,000 ಕೋಟಿ ) ಆಗಿರಲಿದೆ. ಮುಂದಿನ 2 ತಿಂಗಳಲ್ಲಿ ಈ ಕೊರತೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ. ಆದರೆ, 2012          -13ನೇ ವರ್ಷ, ರಫ್ತುದಾರರ ಪಾಲಿಗೆ ಆಶಾದಾಯಕವಾಗಿರುವ ಸಾಧ್ಯತೆಗಳು ಇಲ್ಲ  ಎಂದು ಖುಲ್ಲರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry