ರಫ್ತು ವಹಿವಾಟು ಶೇ 32ರಷ್ಟು ಹೆಚ್ಚಳ

7

ರಫ್ತು ವಹಿವಾಟು ಶೇ 32ರಷ್ಟು ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ  ದೇಶದ ಒಟ್ಟು ರಫ್ತು ಪ್ರಮಾಣ ಶೇ32.5ರಷ್ಟು ಹೆಚ್ಚಿದ್ದು, 20.6 ಶತಕೋಟಿ ಡಾಲರ್‌ಗಳಿಗೆ ಏರಿದೆ.

ವಿದೇಶಿ ಮಾರುಕಟ್ಟೆಗಳಿಂದ ಸರಕುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ರಫ್ತು ಗಣನೀಯವಾಗಿ ಹೆಚ್ಚಿದೆ. ಏಪ್ರಿಲ್-ಜನವರಿ ಅವಧಿಯಲ್ಲಿ ಹಡಗು ಮೂಲಕ ನಡೆಯುವ ರಫ್ತು ವಹಿವಾಟು ಶೇ 29 ರಷ್ಟು ಹೆಚ್ಚಿದ್ದು, 184 ಶತಕೋಟಿಗೆ ಏರಿದೆ. ‘ಇದು ದೊಡ್ಡ ಪ್ರಮಾಣದ ಪ್ರಗತಿಯಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಬರುತ್ತಿರುವ ಬೇಡಿಕೆ ಗಮನಿಸಿದರೆ ಫೆಬ್ರುವರಿ ಅಂತ್ಯಕ್ಕೆ ಇದು 200 ಶತಕೋಟಿ ಡಾಲರ್ ದಾಟಲಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.

2011ನೇ ಸಾಲಿನಲ್ಲಿ ಒಟ್ಟು ಆಮದು ಪ್ರಮಾಣ ಶೇ 13ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಒಟ್ಟು 28 ಶತಕೋಟಿ ಡಾಲರ್ ವಹಿವಾಟು ಅಂದಾಜಿಸಲಾಗಿದೆ. ಈಗಾಗಲೇ ಕಳೆದ 10 ತಿಂಗಳಲ್ಲಿ ಆಮದು ಶೇ 17ರಷ್ಟು ಹೆಚ್ಚಿದ್ದು, 273 ಶತಕೋಟಿ ಡಾಲರ್ ವಹಿವಾಟು ನಡೆಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಆಮದು ಮೂಲಕ 8 ಶತಕೋಟಿ ಡಾಲರ್ ಖೋತಾ ವಹಿವಾಟು ದಾಖಲಾಗುವ ಸಾಧ್ಯತೆ ಇದೆ. 

ಕಳೆದ 10 ತಿಂಗಳಲ್ಲಿ ಒಟ್ಟು ರಫ್ತು ಖೋತಾ ವಹಿವಾಟು 89 ಶತಕೋಟಿ ಡಾಲರ್‌ಗಳಷ್ಟಾಗಿದೆ. ಆಭರಣಗಳು, ಎಂಜಿನೀಯರಿಂಗ್ ಉತ್ಪನ್ನಗಳು, ಪೆಟ್ರೋಲಿಯಂ, ಎಣ್ಣೆ, ಮಾರ್ಜಕಗಳ ರಫ್ತು ಈ ಅವಧಿಯಲ್ಲಿ ಹೆಚ್ಚಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry