ಮಂಗಳವಾರ, ಮೇ 18, 2021
30 °C

ರಬಕವಿಯಲ್ಲಿ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 16ರಂದು ತಾಲ್ಲೂಕಿನ ರಬಕವಿಯ ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನದಲ್ಲಿ ಜರುಗಲಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಸವರಾಜ ಯಡಹಳ್ಳಿ ತಿಳಿಸಿದ್ದಾರೆ.ಅಂದು ಬೆಳಿಗ್ಗೆ 7.30ಕ್ಕೆ ಡಿ.ಕೆ.ಕೊಟ್ರಶೆಟ್ಟಿ ರಾಷ್ಟಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಕಸಾಪ ಧ್ವಜಾರೋಹಣ ಹಾಗೂ ತಾವು ಕನ್ನಡ ಧ್ವಜಾರೋಹಣ ನೆರವೇರಿಸುವುದಾಗಿ ತಿಳಿಸಿದ್ದಾರೆ.ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜುನ ಹುಲಗಬಾಳಿ ನೇತೃತ್ವದಲ್ಲಿ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ಬಾಗೋಜಿಮಠದಿಂದ ಆರಂಭವಾಗಿ ಸಮ್ಮೇಳನದ ಸ್ಥಳ ತಲುಪಲಿದೆ. ಸಚಿವೆ ಉಮಾಶ್ರೀ ಬೆಳಿಗ್ಗೆ 10 ಗಂಟೆಗೆ ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ಅಧ್ಯಕ್ಷತೆ ವಹಿಸುವರು. ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸುವರು.ಕಸಾಪ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ಪಿ.ಸಿ. ಗದ್ದಿಗೌಡರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಬೇರೆ ಬೇರೆ ಲೇಖಕರ ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಎಂಎಲ್‌ಸಿ ಜಿ.ಎಸ್. ನ್ಯಾಮಗೌಡ ಪುಸ್ತಕ ಮಳಿಗೆಯನ್ನು ಉದ್ಘಾಟಿಸುವರು.ಮಾಜಿ ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಜಮಖಂಡಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ಬೀಳಗಿ ಶಾಸಕ ಬಾಬುರೆಡ್ಡಿ ತುಂಗಳ, ಜಿ.ಪಂ.ಅಧ್ಯಕ್ಷೆ ಶಾಂತಾಬಾಯಿ ಭೂಷಣ್ಣವರ, ತಾ.ಪಂ.ಅಧ್ಯಕ್ಷ ರಾವಸಾಹೇಬ ಗುಬಚೆ, ಜಿ.ಪಂ. ಸದಸ್ಯರಾದ ಸಾವಿತ್ರಿ ಪಾಟೀಲ, ಪದ್ಮವ್ವ ಅಕಿವಾಟ, ಉದ್ದಿಮೆದಾರ ಜಗದೀಶ ಗುಡಗುಂಟಿ, ಡಿಡಿಪಿಐ ಎ.ಎಂ. ಮಡಿವಾಳರ, ಬಿಇಒ ಎ.ಸಿ.ಗಂಗಾಧರ, ಆರ್. ಎಂ. ಕೊಡಗೆ, ಶ್ರೀಶೈಲ ಕರಿಶಂಕರಿ ಪಾಲ್ಗೊಳ್ಳುವರು.ಮಧ್ಯಾಹ್ನ 12 ಗಂಟೆಗೆ ಜರುಗುವ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಸಿದ್ಧರಾಜ ಪೂಜಾರಿ ವಹಿಸುವರು. ಮ.ಪ.ಮದರಖಂಡಿ, ರಾಮಣ್ಣ ಕೊಣ್ಣೂರ, ಎಂ.ಎಸ್. ಬದಾಮಿ, ಶಾರದಾ ಮುಳ್ಳೂರ ಪ್ರಬಂಧ ಮಂಡಿಸುವರು. ಸಮ್ಮೇಳಾನಾಧ್ಯಕ್ಷರ ಬದುಕು-ಬರಹ ಕುರಿತು ಮಧ್ಯಾಹ್ನ 2 ಗಂಟೆಗೆ ನಡೆಯುವ 2ನೇ ಗೋಷ್ಟಿಯಲ್ಲಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮಾತನಾಡಲಿದ್ದಾರೆ.ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ಜರುವುದು. ಮಧ್ಯಾಹ್ನ 3 ಗಂಟೆಗೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಜಿ.ಎಸ್.ವಡಗಾಂವಿ ವಹಿಸುವರು. ಸಂಜೆ 5 ಗಂಟೆಗೆ ನೆರವೇರಲಿರುವ 4ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಶಿವಯೋಗಿ ಬಿದರಿ ವಹಿಸುವರು. ಶರಣ ಈಶ್ವರ ಮಂಟೂರ ಅವರ ಸಾನಿಧ್ಯದಲ್ಲಿ ಸಂಜೆ 6 ಗಂಟೆಗೆ ಸನ್ಮಾನ ಕಾರ್ಯಕ್ರಮ ಏರ್ಪಾಡಾಗಲಿದೆ. ಅಧ್ಯಕ್ಷತೆಯನ್ನು ದೊಡ್ಡಣ್ಣ ಭಜಂತ್ರಿ ವಹಿಸುವರು. ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ಸಂಗಮೇಶ ಬಿರಾದಾರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಇಂದು

ಜಮಖಂಡಿ: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಿಮಿತ್ತ ಇದೇ 12ರಂದು ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಸದಾನಂದನಗರ ಸಿಕ್ಕಲಗಾರ ಕಾಲೊನಿಯ ಸರ್ವೋದಯ ಬಾಲಕಾರ್ಮಿಕರ ಶಾಲೆಯ ಆವರಣದಲ್ಲಿ ಕಾನೂನು ಅರಿವು- ನೆರವು ಕಾರ್ಯಕ್ರಮ ಜರುಗಲಿದೆ.ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜಕರ ಇಲಾಖೆ, ತಾಲ್ಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವೋದಯ ಸೇವಾ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಿದೆ.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೊಟ್ರಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸುವರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸರಸ್ವತಿದೇವಿ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ ಆರ್.ವಿ.ಕಟ್ಟಿ, ವಕೀಲರ ಸಂಘದ ಅಧ್ಯಕ್ಷ ಸಿ.ಆರ್.ಸುತಾರ, ಉಪಾಧ್ಯಕ್ಷ ಎಂ.ಆರ್. ಸೈಯದ್, ಎಪಿಪಿ ಎಚ್.ಜಿ. ಮುಲ್ಲಾ, ಹೆಚ್ಚುವರಿ ಎಪಿಪಿ ಚಿದಾನಂದ ಎಸ್.ಬಡಿಗೇರ, ಬಿಇಒ ಎ.ಸಿ. ಗಂಗಾಧರ, ಕಾರ್ಮಿಕ ನಿರೀಕ್ಷಕ ಮಂಜುನಾಥ ಅಸ್ತಕಟ್ಟಿ, ನಗರಸಭೆ ಸದಸ್ಯ ಯಮನೂರ ಸಿಕ್ಕಲಗಾರ ಭಾಗವಹಿಸುವರು. ವಕೀಲ ಸಿ.ಎಸ್. ಬಾಂಗಿ, ಉಪನ್ಯಾಸಕ ರಮೇಶ ಮಡಿವಾಳರ ವಿಶೇಷ ಉಪನ್ಯಾಸ ನೀಡುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.