ಬುಧವಾರ, ಜೂನ್ 23, 2021
22 °C

ರಬ್ಬರ್ ತೋಟಕ್ಕೆ ಬೆಂಕಿ: ಲಕ್ಷಾಂತರ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ಎಣ್ಮಕಜೆ ಗ್ರಾಮದ ಮುಳಿಯಾಲ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ರಬ್ಬರ್ ತೋಟಕ್ಕೆ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗುಲಿದ ಪರಿಣಾಮ 15 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಅಡ್ಯನಡ್ಕ ಸಮೀಪದ ಮುಳಿಯಾಲದ ಸೀತಾರಾಮ ಭಟ್ ಮತ್ತು ಲಕ್ಷ್ಮಿ ಎಂಬವರಿಗೆ ಈ ರಬ್ಬರ್ ತೋಟ ಸೇರಿತ್ತು. ಶಾರ್ಟ್ ಸರ್ಕಿಟ್‌ನಿಂದ ಬೆಂಕಿ  ತಗುಲಿದ್ದನ್ನು ಗಮನಿಸಿದ ಸೀತಾರಾಮ ಭಟ್, ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.ಅವರು ಸ್ಥಳಕ್ಕೆ ಬರುವಷ್ಟರಲ್ಲಿ 3.5 ಎಕರೆಗಳಲ್ಲಿ ಎರಡು ಎಕರೆ ಜಾಗದಲ್ಲಿದ್ದ 400 ರಬ್ಬರ್ ಗಿಡಗಳು ಹಾಗೂ 20 ತೆಂಗಿನ ಮರ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.ಬೆಂಕಿ ಕಿಚ್ಚು ತೋಟ ಇಡೀ ಹರಡಿತು. ಅಗ್ನಿಶಾಮಕ ದಳದ ಸಿಬ್ಬಂದಿ ಅದನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎಣ್ಮಕಜೆ ಗ್ರಾ.ಪಂ ಸದಸ್ಯರಾದ ಐತಪ್ಪ ಕುಲಾಲ್ ಭೇಟಿ ನೀಡಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿ ಸುಂದರ, ಸಿಬ್ಬಂದಿಗಳಾದ ರಾಜೇಶ್, ಕೃಷ್ಣಪ್ಪ, ಜಯ, ಶಿವಾಜಿ, ಆನಂದ ನಾಯ್ಕ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.