`ರಬ್ಬೀ' ಶತಕ

7

`ರಬ್ಬೀ' ಶತಕ

Published:
Updated:
`ರಬ್ಬೀ' ಶತಕ

`ಬೈಬಲ್'ನಲ್ಲಿನ ಕಥನಗಳನ್ನು ಆಧರಿಸಿದ, ಯೇಸುಕ್ರಿಸ್ತನ ಸಾರ್ವಕಾಲಿಕ ಸಂದೇಶವನ್ನು ಪ್ರಸಾರ ಮಾಡುವ ಉದ್ದೇಶದ `ರಬ್ಬೀ' ಧಾರಾವಾಹಿ ನೂರು ಕಂತುಗಳ ಸಂಭ್ರಮದಲ್ಲಿದೆ.

ಕಳೆದ ಡಿಸೆಂಬರ್‌ನಲ್ಲಿ `ಚಂದನ' ವಾಹಿನಿಯಲ್ಲಿ ಆರಂಭವಾದ `ರಬ್ಬೀ' ಕ್ರಿಸ್ತನ ಉನ್ನತ ವ್ಯಕ್ತಿತ್ವದ ಹಲವು ಮುಖಗಳನ್ನು ಅನಾವರಣಗೊಳಿಸುವ ಮೂಲಕ ಜನಪ್ರಿಯತೆ ಗಳಿಸಿದೆ.ಎಡ್ವರ್ಡ್ ಶಾಂಪ್ರಸಾದ್‌ರ ನೇತೃತ್ವದಲ್ಲಿ `ರಬ್ಬೀ' ಧಾರಾವಾಹಿಯನ್ನು `ಮೈತ್ರಿ ಕ್ರಿಯೇಷನ್ಸ್' ಸಂಸ್ಥೆ ನಿರ್ಮಿಸುತ್ತಿದೆ. `ರಬ್ಬೀ' ನಿರ್ದೇಶಿಸುತ್ತಿರುವ ಶಾಂಪ್ರಸಾದ್ ಅವರು ಈ ಮೊದಲು, ಕ್ರಿಸ್ತನ ಬದುಕನ್ನು ಆಧರಿಸಿದ `ಎರಡು ಸಾವಿರ ವರ್ಷಗಳ ಹಿಂದೆ' ಎಂಬ ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸ್ದ್ದಿದರು.ಬೈಬಲ್ ಗ್ರಂಥದ `ಹೊಸ ಒಡಂಬಡಿಕೆ' ಅವಧಿಯ ಯೇಸು ಕ್ರಿಸ್ತನ ಬದುಕು, ಕ್ರೈಸ್ತ ಧರ್ಮಸಭೆಯ ಬೆಳವಣಿಗೆ, ಅಭಿವೃದ್ಧಿ, ಇತ್ಯಾದಿಗಳನ್ನು ಈ ಧಾರಾವಾಹಿ ಬಿಂಬಿಸುತ್ತಿದೆ.  ಹೀಬ್ರೂ ಭಾಷೆಯಲ್ಲಿ `ರಬ್ಬೀ' ಎಂದರೆ `ಗುರು' ಎಂದರ್ಥ.

ಅಂದರೆ ಬದುಕಿನಲ್ಲಿ ಯಶಸ್ಸು ಪಡೆಯಲು ಸೂಕ್ತ ಮಾರ್ಗ ತೋರಿಸುವಾತ. ಬೆಳಕಿನ ಮಾರ್ಗದ ಈ ಧಾರಾವಾಹಿ ಶನಿವಾರ ಹಾಗೂ ಭಾನುವಾರದಂದು ಸಂಜೆ 7.30ಕ್ಕೆ `ಚಂದನ' ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಪ್ರಸ್ತುತ ನೂರನೇ ಸಂಚಿಕೆಯ ಸಂಭ್ರಮದಲ್ಲಿರುವ `ರಬ್ಬೀ' ಬಳಗ ತನ್ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry