ಶನಿವಾರ, ಮೇ 15, 2021
25 °C

ರಭಸದ ಮಳೆ: ರಸ್ತೆ ಮೇಲೆ ಹರಿದ ರಾಡಿ ನೀರು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬುಧವಾರ ಸಂಜೆ ರಭಸದ ಮಳೆ ಸುರಿದ ಪರಿಣಾಮ ಚರಂಡಿಗಳೆಲ್ಲ ತುಂಬಿ ರಾಡಿ ನೀರು ರಸ್ತೆಗೆ ನುಗ್ಗಿದೆ.  ಧಾರಾಕಾರ ಮಳೆಗೆ ಹತ್ತು ನಿಮಿಷದಲ್ಲಿ ಇಲ್ಲಿನ ಕೃಷ್ಣಾ ಟಾಕೀಜ್ ಹತ್ತಿರದ ಎರಡೂ ಬದಿಯ ಚರಂಡಿಗಳು ತುಂಬಿದವು.ಚರಂಡಿಗಳು ಕಸಕಡ್ಡಿಗಳಿಂದ ಮುಚ್ಚಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆ ಉಂಟಾಯಿತು. ತಗ್ಗು ಪ್ರದೇಶದಲ್ಲಿ ಇರುವ ಇಲ್ಲಿನ ಬೇವಿನಮರದ ಅವರ ಹಾರ್ಡ್‌ವೇರ್ ಅಂಗಡಿ ಎದುರಿಗೆ ಒಂದು ಅಡಿಯಷ್ಟು ನೀರು ನಿಂತುಕೊಂಡು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.

 

ಸ್ಥಳೀಯ ತೋಟದ್ದೇವರಮಠದ ಸಮೀಪ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಇಲ್ಲಿಯೂ  ಹೊಲಸು ನೀರು ರಸ್ತೆ ಮೇಲೆ ಹರಿದು ಜನರ ಓಡಾಟಕ್ಕೆ ಅಡ್ಡಿಯಾಯಿತು.

 

ಲಕ್ಷ್ಮೇಶ್ವರ ಸಮೀಪದ ಬಟ್ಟೂರು, ಪುಟಗಾಂವ್‌ಬಡ್ನಿ, ಶಿಗ್ಲಿ, ದೊಡ್ಡೂರು, ರಾಮಗಿರಿ ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲೂ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.