ರಮ್ಜಾನ್ ಉಪವಾಸ ಆಚರಣೆ: ಸಮೋಸಾ, ಮಿರ್ಚಿ, ಭಜಿಗೆ ಭಾರಿ ಬೇಡಿಕೆ

7

ರಮ್ಜಾನ್ ಉಪವಾಸ ಆಚರಣೆ: ಸಮೋಸಾ, ಮಿರ್ಚಿ, ಭಜಿಗೆ ಭಾರಿ ಬೇಡಿಕೆ

Published:
Updated:
ರಮ್ಜಾನ್ ಉಪವಾಸ ಆಚರಣೆ: ಸಮೋಸಾ, ಮಿರ್ಚಿ, ಭಜಿಗೆ ಭಾರಿ ಬೇಡಿಕೆ

ಭಟ್ಕಳ: ರಮ್ಜಾನ್ ತಿಂಗಳಲ್ಲಿ ರೋಜಾ ಅಂದರೆ ಉಪವಾಸ ನಸುಕಿನಲ್ಲಿ ಸೂರ್ಯೋದಯದ ಮೊದಲು ಸುಮಾರು 4.30ಕ್ಕೆ ಆರಂಭವಾಗಿ  ಸಂಜೆ 7 ಗಂಟೆಗೆ ಮುಗಿಯುತ್ತದೆ.ಕಟ್ಟಾ ಸಂಪ್ರದಾಯವಾದಿಗಳಾದ ಭಟ್ಕಳದ ಮುಸ್ಲಿಮರು ಕಟ್ಟುನಿಟ್ಟಾಗಿ ರೋಜಾ ಆಚರಿಸುತ್ತಾರೆ. ಐದೂ ಹೊತ್ತು ನಮಾಜ್ ಮಾಡಿ ಮೂವತ್ತು ದಿನಗಳ ಉಪವಾಸದ ಬಳಿಕ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರಗಳಿಂದ ಆಚರಿಸುವುದು ವಿಶೇಷವಾಗಿದೆ.ಇಲ್ಲಿಯ ನವಾಯತ್ ಮುಸ್ಲಿಮರು ಕಟ್ಟಾ ಸಂಪ್ರದಾಯಸ್ಥರು. ಕಳೆದ ಒಂದು ವಾರದಿಂದ ಕಟ್ಟುನಿಟ್ಟಿನ ವೃತ ನಡೆಸುತ್ತಿರುವ ಇಲ್ಲಿನ ಮುಸ್ಲಿಮರು ಒಂದು ತಿಂಗಳು ತಮ್ಮ ಎ್ಲ್ಲಲ ಅಭೀಷ್ಟೆಗಳನ್ನು ಬದಿಗೊತ್ತಿ ಕೇವಲ ವೃತ ಆಚರಣೆಯಲ್ಲಿ ತೊಡಗುತ್ತಾರೆ.ಸಂಜೆ 7 ಗಂಟೆಗೆ ಖರ್ಜೂರ ಸೇವಿಸಿ ರೋಜಾ ಬಿಡುವರು. ನಂತರ ನಮಾಜ್ ಮಾಡಿ, ಉಳಿದ ಆಹಾರ ಪದಾರ್ಥಗಳ ಸೇವನೆ ಮಾಡುತ್ತಾರೆ. ರಮಜಾನ್ ತಿಂಗಳಲ್ಲಿ ಮಾತ್ರ ವಿಶೇಷವಾಗಿ ತಯಾರಿಸಿ ಮಾರಲ್ಪಡುವ ಸಮೋಸಾ, ಮಿರ್ಚಿ, ಬಟಾಟೆ ವಡೆ, ಪನ್ನೀರ್‌ಗೆ ಎಲ್ಲಿಲ್ಲದ ಬೇಡಿಕೆ. ಇದನ್ನು ಮನೆಗೆ ಕೊಂಡೊಯ್ಯಲು ಇಲ್ಲಿನ ಮುಸ್ಲಿಮರು ಸಂಜೆ ಸರದಿ ಸಾಲಿನಲ್ಲಿ ನಿಂತುಕೊಂಡಿರುತ್ತಾರೆ. ಪಟ್ಟಣದಲ್ಲಿ ಪ್ರತಿ ದಿನ 5 ಲಕ್ಷಕ್ಕೂ ಹೆಚ್ಚು ಸಮೋಸಾ ಮಾರಾಟವಾಗುತ್ತಿರುವುದು ದಾಖಲೆ ಎನ್ನಲಾಗಿದೆ.ರಮ್ಜಾನ್ ಮಾಸವಿಡೀ ಇಫ್ತಿಯಾರ್ ಕೂಟಗಳ ಭರಾಟೆಯೂ ಜೋರಾಗಿಯೇ ನಡೆಯುತ್ತದೆ. ಇನ್ನೊಂದು ವಾರದಲ್ಲಿ ರಮ್ಜಾನ್ ಪೇಟೆಯೂ ಭಟ್ಕಳಕ್ಕೆ ಹೊಸ ಕಳೆ ತರುತ್ತದೆ. ಇಲ್ಲಿನ ರಮ್ಜಾನ್ ಪೇಟೆ ನೋಡಲೆಂದೇ ನೆರೆಯ ತಾಲ್ಲೂಕುಗಳಿಂದಲೂ ಜನರು ಬರುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry